ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ವಾಟ್ಸಾಪ್ ಚಾಟ್ ಸೇವೆ ಆರಂಭ

ಮಂಗಳೂರು(ಬೆಂಗಳೂರು): ರಾಜ್ಯದ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ಯಾರಂಟಿ ಯೋಜನೆಯಾಗಿ ಪಂಚಮಿತ್ರ ಪೋರ್ಟಲ್ ಮೂಲಕ ವಾಟ್ಸಾಪ್ ಚಾಟ್ ಸೇವೆಯನ್ನು ಆರಂಭಿಸಲಾಗಿದೆ. ಇದೇ ದೇಶದಲ್ಲೇ ಮೊದಲು ಜಾರಿಗೊಳಿಸಿದಂತ ಸೇವೆಯಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಡಿಸಿಎಂ ಡಿ.ಕೆ ಶಿವಕುಮಾರ್, ಗ್ರಾಮ ಪಂಚಾಯ್ತಿಗಳ ಸಂಪೂರ್ಣ ಮಾಹಿತಿ ಈಗ ನಿಮ್ಮ ಅಂಗೈಯಲ್ಲೇ ಲಭ್ಯವಾಗಲಿದೆ. ಅದಕ್ಕಾಗಿ ಪಂಚಮಿತ್ರ ಪೋರ್ಟಲ್ ಮತ್ತು ದೇಶದಲ್ಲಿಯೇ ಮೊದಲ ಬಾರಿ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರಿ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ರಾರಂಟಿಯ ಯೋಜನೆ ಇದಾಗಿದೆ. ಗ್ರಾಮೀಣ ಜನರು ಜಸ್ಟ್ ವಾಟ್ಸಾಪ್ ಮಾಡಿ ಗ್ರಾಮ ಪಂಚಾಯ್ತಿಯ ಸೇವೆಗಳನ್ನು ಕುಳಿತಲ್ಲೇ ಪಡೆಯಬಹುಗಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಜನರು ಕುಳಿತಲ್ಲೇ ನಾನಾ ಸೇವೆಗಳನ್ನು ಪಡೆಯಲು ಹಾಗೂ ತಮ್ಮ ಕುಂದು ಕೊರತೆಗಳನ್ನು ದಾಖಲಿಸುವ ಸಲುವಾಗಿ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಪಂಚಮಿತ್ರ ಪೋರ್ಟಲ್ ಹಾಗೂ ವಾಟ್ಸಾಪ್ ಚಾಟ್‌ ಲೋಕಾರ್ಪಣೆಗೊಳಿಸಿದ್ದು, https://panchamitra.karnataka.gov.in ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸೇವೆಗಳನ್ನು ಪಡೆಯಬಹುದಾಗಿದೆ. 82775 06000 ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

LEAVE A REPLY

Please enter your comment!
Please enter your name here