ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ-ಶಂಕಿತನಿಗಾಗಿ ಬಳ್ಳಾರಿಯಲ್ಲಿ ಎನ್‌ಐಎ ಹುಡುಕಾಟ

ಮಂಗಳೂರು(ಬಳ್ಳಾರಿ): ಬೆಂಗಳೂರಿನ ‘ದಿ ರಾಮೇಶ್ವರಂ ಕೆಫೆ’ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದು ರಾಷ್ಟ್ರೀಯ ತನಿಖಾ ದಳ ಬಳ್ಳಾರಿಗೆ ಬಂದು ಪರಿಶೀಲನೆ ನಡೆಸಿದೆ.

ಮಾ.6ರ ರಾತ್ರಿ 3 ಗಂಟೆ ಸುಮಾರಿನಲ್ಲಿ ನಗರಕ್ಕೆ ಆಗಮಿಸಿದ ಎನ್‌ಐಎ ತಂಡ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಬಾಂಬ್‌ ಸ್ಫೋಟದ ಬಳಿಕ ಶಂಕಿತನು ತುಮಕೂರು ಬಸ್‌ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದ್ದು, ಅಲ್ಲಿಂದ ಬಸ್ ಹಿಡಿದು ಬಳ್ಳಾರಿಗೆ ಬಂದಿರುವ ಬಗ್ಗೆ ಎನ್‌ಐಗೆ ಸುಳಿವು ಸಿಕ್ಕಿದೆ. ಬಳ್ಳಾರಿ ಬಸ್‌ನಿಲ್ದಾಣದಿಂದ ಆತ ಮತ್ತೊಂದು ಬಸ್‌ ಹತ್ತಿ ಬೇರೆ ಕಡೆಗೆ ಹೋಗಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ರಾತ್ರಿ ಕರೆ ಮಾಡಿದ್ದ ಎಸ್‌ಪಿ ತನಿಖಾ ತಂಡವೊಂದು ಬಳ್ಳಾರಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಿರುವುದಾಗಿಯೂ, ಸಿಸಿಟಿವಿ ದೃಶ್ಯಾವಳಿಗಳನ್ನು ಅವರಿಗೆ ಒದಗಿಸುವಂತೆ ಹೇಳಿದರು. ಅದರಂತೆ ದೃಶ್ಯಾವಳಿಗಳನ್ನು ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಕ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here