ಸರ್ವೆ ಮಾಡಲು ಲಂಚದ ಬೇಡಿಕೆ – ಲೋಕಾಯುಕ್ತ ಬಲೆಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಸರ್ವೇಯರ್ ಶೀತಲ್‌

ಮಂಗಳೂರು: ಸರ್ವೆ ನಡೆಸಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಮಂಗಳೂರಿನ ಸರ್ವೇಯರ್‌ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಗಳೂರು ತಾಲೂಕು ಕಛೇರಿಯಲ್ಲಿ ಸರ್ವೆಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶೀತಲ್ ರಾಜ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಾಗದ ಸರ್ವೆ ಮಾಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಸದ್ರಿ ಜಮೀನಿನ ಸರ್ವೆ ಕಾರ್ಯ ನಡೆಸಿ ಸ್ಥಳ ಮಹಜರು ನಡೆಸಿರುತ್ತಾರೆ. ಬಳಿಕ  ಜಮೀನಿನ ನಕ್ಷೆ ನೀಡಲು ಸ್ವಲ್ಪ ಖರ್ಚು ಇದೆ ಎಂದು ತಿಳಿಸಿ ಸರ್ವೆಯರ್ ಶೀತಲ್ ರಾಜ್ ಇವರು ರೂ 5,000/- ಕೊಡಿ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವ್ಯಕ್ತಿ ಸ್ವಲ್ಪ ಕಡಿಮೆ ಮಾಡಿ ಎಂದು ಚರ್ಚೆ ಮಾಡಿದಾಗ ರೂ 4,000/- ಕೊಡಿ ಎಂದಿದ್ದರು.

ಲಂಚದ ಹಣವನ್ನು ಸ್ವೀಕರಿಸುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಎಸ್‌ ಪಿ ಸೈಮನ್ ಹಾಗೂ ಡಿವೈಎಸ್‌ಪಿ ಚೆಲುವರಾಜ್‌ ಅವರ ತಂಡ ಆರೋಪಿ ಶೀತಲ್‌ ರಾಜ್‌ ನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಕಂದಾಯ ಇಲಾಖೆಯಲ್ಲಿ ಸರ್ವೆಯರ್ ಕೊರತೆ ಇದ್ದು, ಅರ್ಜಿ ಸಲ್ಲಿಸಿದ ಹಲವಾರು ಜನರ ಜಮೀನು ಇನ್ನೂ ಸರ್ವೆ ಆಗದೆ ನಿತ್ಯ ಕಂದಾಯ ಇಲಾಖೆ ಅಲೆದಾಡುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಟ್ಟು ಕೊಂಡು ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದ ಸರ್ವೇಯರ್ ಶೀತಲ್ ರಾಜ್‌ ವಿಚಾರವನ್ನು ಲೋಕಾಯುಕ್ತರಿಗೆ ತಿಳಿಸಿದ ಆ ವ್ಯಕ್ತಿ ಸರ್ವೇಯರ್ ನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ್ದಾರೆ. ಸದ್ಯ ಈಗ ಶೀತಲ್ ರಾಜ್‌ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದು, ಎಫ್ಐಆರ್ ದಾಖಲಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಾ.ಗಾನ ಪಿ ಕುಮಾರ್ ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ.ಎ,  ಸುರೇಶ್ ಕುಮಾರ್.ಪಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here