ಮಂಗಳೂರು(ಬೆಂಗಳೂರು): ನಗರದಲ್ಲಿ ಮಹಿಳೆಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದ ಅಮಾನವೀಯ ಘಟನೆ ನಡೆದಿದೆ. ಪತಿ ಮೇಲಿನ ಕೋಪಕ್ಕೆ ಪ್ರಿಯಕರನೊಂದಿಗೆ ಸೇರಿ ತನ್ನ ಮೂರು ವರ್ಷದ ಮಗುವಿಗೆ ಹೆತ್ತತಾಯಿಯೇ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬಳು ತನ್ನ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ್ದ ಪ್ರಕರಣದ ನೆನಪು ಮನಸ್ಸಿನಿಂದ ಮಾಸುವ ಮುನ್ನವೇ ಈ ಕೃತ್ಯ ಬೆಳಕಿಗೆ ಬಂದಿದೆ.
ಆಯೇಷಾ ಎಂಬಾಕೆ ಇಮ್ರಾನ್ ಖಾನ್ ಎಂಬಾತನನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗು ಜನಿಸಿದೆ. ಸದ್ಯ ದಂಪತಿ ವಿಚ್ಛೇದನ ಪಡೆದುಕೊಂಡಿದ್ದು, ಆಯೇಷಾ ತವರಿಗೆ ಹೋಗಿ ತಾಯಿ ಜೊತೆ ನೆಲೆಸಿದ್ದಾಳೆ. ಆಯೇಷಾಗೆ ಸಲೀಂ ಎಂಬ ಪ್ರಿಯಕರನಿದ್ದು, ಪತಿ ಇಮ್ರಾನ್ ಖಾನ್ ಮೇಲಿನ ಕೋಪಕ್ಕೆ ಆಯೇಷಾ ತನ್ನ ಪ್ರಿಯಕರ ಸಲೀಂ ಜೊತೆ ಸೇರಿಕೊಂಡು ಹೆತ್ತಮಗುವಿಗೆ ಚಿತ್ರಹಿಂಸೆ ನೀಡಿದ್ದಾಳೆ. ಮಗುವನ್ನು ಕಚ್ಚಿ, ಅದಕ್ಕೆ ಫ್ರಿಡ್ಜ್ ನೀರು ಸರಿದು ಚಿತ್ರಹಿಂಸೆ ನೀಡಲಾಗಿದೆ. ಅಲ್ಲದೆ, ಕೈಗೆ ಸಿಗರೇಟ್ನಿಂದ ಸುಡಲಾಗಿದೆ. ಬಳಿಕ ಈ ಮಗುವಿನ ಮೇಲೆ ಸಲೀಂ ಹಲ್ಲೆ ನಡೆಸಿದ್ದಾನೆ. ಕೆಆರ್ಎಸ್ ಬಳಿಯ ಲಾಡ್ಜ್ನಲ್ಲಿ ಹೋಗಿ ಮಗಳನ್ನು ನೆಲಕ್ಕೆ ಬಿಸಾಡಿರುವ ಆರೋಪವೂ ಕೇಳಿಬಂದಿದೆ.
ಚಿತ್ರಹಿಂಸೆಯ ಬಳಿಕ ಘಟನೆಯನ್ನು ತಂದೆಗೆ ಹೇಳಿದರೆ ತಂದೆಯ ಜೊತೆ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಭಯಗೊಂಡ ಮಗು ತಂದೆಯ ಜೊತೆ ಘಟನೆಯನ್ನು ಹೇಳಿಕೊಂಡಿರಲಿಲ್ಲ. ಕೆಲ ದಿನಗಳ ನಂತರ ಘಟನೆ ಬಗ್ಗೆ ಬಾಯಿಬಿಟ್ಟಿದ್ದು, ಇಮ್ರಾನ್ ನೀಡಿದ ದೂರಿನ ಅನ್ವಯ ಅಯೇಷಾ, ಈಕೆಯ ಪ್ರಿಯಕರ ಸಲೀಂ ಮತ್ತು ಜಬೀರ್ ಎಂಬವರ ವಿರುದ್ಧ ಜೆಜೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಯೇಷಾ ಜೊತೆ ಮಾತನಾಡಲು ಹೊರಗಡೆಯಿಂದ ಜಾವೀರ್, ಸಲೀಮ್ ಅನ್ನುವವರು ಬರುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗಿ ಎಂದು ಹೇಳುತ್ತಾರೆ. ಮಗುವಿಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ. ಜಾವೀರ್ ಎಂಬಾತ ಮಗುವಿನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಇಮ್ರಾನ್ ಆರೋಪಿಸಿದ್ದಾರೆ. ಮಗುವಿಗೆ ಚಿಕಿತ್ಸೆ ಕೊಟ್ಟಿದ್ದಾರೆ. ಮಗುವಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ದೂರು ಕೊಟ್ಟಿದ್ದಾನೆ. ನನ್ನ ಮಾಜಿ ಪತ್ನಿ ಮತ್ತು ಬಾಯ್ ಫ್ರೆಂಡ್ ಬಂದಿದ್ದರು. ವಿಚಾರಣೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.