ಸುಪ್ರೀಂ ಕೋರ್ಟ್ ಆದೇಶದಂತೆ ಆಯೋಗಕ್ಕೆ ಚುನಾವಣಾ ಬಾಂಡ್‌’ಗಳ ಡೇಟಾ ಸಲ್ಲಿಸಿದ ಎಸ್‌ಬಿಐ-ಮಾ.15 ಕ್ಕೆ ಡಾಟಾ ಬಿಡುಗಡೆ

ಮಂಗಳೂರು(ನವದೆಹಲಿ): ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ಅನುಗುಣವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಚ್ಚಿದ ಲಕೋಟೆಯಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌’ಗಳ ಡೇಟಾವನ್ನು ಸಲ್ಲಿಸಿದೆ.

ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ದೃಢೀಕರಿಸುವ ಅಫಿಡವಿಟ್ ಅನ್ನು ಸಹ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಶುಕ್ರವಾರ ಸಂಜೆ 5 ಗಂಟೆಗೆ ಚುನಾವಣಾ ಸಮಿತಿಯು ಡೇಟಾವನ್ನು ಬಿಡುಗಡೆ ಮಾಡಲಿದೆ. ಈ ಡೇಟಾವನ್ನು ನೀಡಲು ಮಾರ್ಚ್ 6ರವರೆಗೆ ಗಡುವನ್ನು ವಿಸ್ತರಿಸಲು ಎಸ್‌ಬಿಐ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಗಡುವಿನೊಳಗೆ ಈ ಡೇಟಾವನ್ನು ಪೂರೈಸಲು ವಿಫಲವಾದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಬಗ್ಗೆ ಎಚ್ಚರಿಕೆ ನೀಡಿತ್ತು. ಮಾ.15 ರಂದು ಚುನಾವಣಾ ಆಯೋಗ ಬಾಂಡ್ ಅಂಕಿಂಶಗಳನ್ನು‌ ಬಿಡುಗಡೆ ಮಾಡಲಿದೆ.

LEAVE A REPLY

Please enter your comment!
Please enter your name here