ಮಂಗಳೂರು(ಟೋಕಿಯೋ): ಜಪಾನ್‌ನ ರಾಜಧಾನಿ ಟೋಕಿಯೋ ಮೂಲದ ಸ್ಟಾರ್ಟ್-ಅಪ್ ಸಂಸ್ಥೆ ಸ್ಪೇಸ್ ಒನ್ ಉಡಾವಣೆ ಮಾಡಿದ ರಾಕೆಟ್ ಉಡಾವಣೆಯಾದ ಕೆಲಹೊತ್ತಿನಲ್ಲಿ ಸ್ಫೋಟಗೊಂಡಿದೆ.
ಉಪಗ್ರಹವೊಂದನ್ನು ಕಕ್ಷೆಯಲ್ಲಿರಿಸುವ ಮೊದಲ ಜಪಾನಿ ಖಾಸಗಿ ಸಂಸ್ಥೆ ತಾನಾಗಬೇಕೆಂಬ ಹಂಬಲ ಹೊಂದಿದ್ದ ಈ ಸಂಸ್ಥೆ ಈ ಘಟನೆಯಿಂದ ನಿರಾಸೆಗೊಂಡಿದೆ. ಸಂಸ್ಥೆ ನಿರ್ಮಿಸಿದ 18 ಮೀಟರ್ (60 ಅಡಿ) ಎತ್ತರದ ಸಾಲಿಡ್ ಫ್ಯೂಯೆಲ್ ಕೈರೋಸ್ ರಾಕೆಟ್ ವಕಯಾಮ ಎಂಬಲ್ಲಿರುವ ಸಂಸ್ಥೆಯ ಸ್ವಂತ ಲಾಂಚ್ ಪ್ಯಾಡ್‌ನಿಂದ ಉಡಾವಣೆ ಮಾಡಲಾಗಿತ್ತು. ಈ ರಾಕೆಟ್‌ನಲ್ಲಿ ಸಣ್ಣ ಸರ್ಕಾರಿ ಪ್ರಾಯೋಗಿಕ ಉಪಗ್ರಹವಿತ್ತು. ಆದರೆ ಉಡಾವಣೆಯಾದ ಕೆಲವೇ ಸೆಕೆಂಡ್‌ಗಳಲ್ಲಿ ರಾಕೆಟ್ ಬೆಂಕಿಯ ಜ್ವಾಲೆಯಾಗಿ ಕಪ್ಪು ಹೊಗೆ ಉಗುಳಲು ಆರಂಭಿಸಿ ಅವಶೇಷಗಳು ಹತ್ತಿರದ ಗುಡ್ಡ ಪ್ರದೇಶಗಳಲ್ಲಿ ಬಿದ್ದಿದೆ. ಉಡಾವಣೆಯಾದ 51 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಅದು ಕೈಗೂಡಲಿಲ್ಲ. ಸ್ಪೇಸ್ ಒನ್ ಸಂಸ್ಥೆಯನ್ನು 2018 ರಲ್ಲಿ ಜಪಾನ್‌ನ ಕ್ಯಾನನ್ ಇಲೆಕ್ಟ್ರಾನಿಕ್ಸ್, ಐಎಚ್‌ಐ ಏರೋಸ್ಪೇಸ್, ಶಿಮಿಝು ಮತ್ತು ಸರ್ಕಾರಿ ಒಡೆತನದ ಡೆವಲೆಪ್ಮೆಂಟ್ ಬ್ಯಾಂಕ್ ಆಫ್ ಜಪಾನ್ ಜಂಟಿಯಾಗಿ ಸ್ಥಾಪಿಸಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
BREAKING: Space One rocket explodes during launch from southern Japan pic.twitter.com/8IWiu2bRKa
— BNO News (@BNONews) March 13, 2024