ಮಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷದ ಬೂತ್ ಕಾರ್ಯಕರ್ತರ ಸಮಾವೇಶ

ಮಂಗಳೂರು: ಭಾರತೀಯ ಜನತಾ ಪಕ್ಷದ ಬೂತ್ ಕಾರ್ಯಕರ್ತರ ಸಮಾವೇಶ ಮಾ.12ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು.

ಮತ ಗಟ್ಟೆಯನ್ನು ಗೆದ್ದು ಭಾರತವನ್ನು ಗೆಲ್ಲು ಎನ್ನುವಂತಹ ಅಪೇಕ್ಷೆ ನರೇಂದ್ರ ಮೋದಿಯವರದ್ದು. ಬೂತ್‌ನ್ನು ಗೆದ್ದಾಗ ದೇಶವನ್ನು ಗೆಲ್ತೇವೆ ಎನ್ನುವಂತಹ ಪರಿಕಲ್ಪನೆ ಭಾರತೀಯ ಜನತಾ ಪಾರ್ಟಿಯದ್ದು ಹಾಗಾಗಿ ಒಬ್ಬೊಬ್ಬ ಕಾರ್ಯಕರ್ತನೂ ಒಂದೊಂದು ಬೂತ್‌ನ್ನು ಗೆಲ್ಲಬೇಕು ಆಗ ಶಾಶ್ವತವಾದಂತಹ ಗೆಲುವು ಭಾರತೀಯ ಜನತಾ ಪಾರ್ಟಿಯದ್ದು ಹಾಗಾಗಿ ಭಾರತೀಯ ಜನತಾ ಪಾರ್ಟಿ ಬೂತ್ ನ್ನು ಕೇಂದ್ರೀಕೃತವಾಗಿಟ್ಟುಕೊಂಡು ಕಾರ್ಯವನ್ನು ಪ್ರಾರಂಭ ಮಾಡಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕರೆ ನೀಡಿದ್ದಾರೆ. ಮಂಗಳೂರಿನ ಸಂಘನಿಕೇತನದಲ್ಲಿ ಮಾ.12ರಂದು ನಡೆದ ಭಾರತೀಯ ಜನತಾ ಪಕ್ಷದ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಯ ಗುರಿ ನಮ್ಮ ಬೂತ್ ನಲ್ಲಿ ಅತೀ ಹೆಚ್ಚು ಮತ ಪಡೆಯುವಂತದ್ದು, ಕಳೆದ ಬಾರಿಯ ಚುನಾವಣೆಯಲ್ಲಿ 2ಲಕ್ಷದ 74ಸಾವಿರದ ಮತಗಳ ಅಂತರದಿಂದ ಗೆದ್ದಿದ್ದೇವೆ. ಈ ಬಾರಿ 2000 ಬೂತ್‌ಗಳಿವೆ ಹಾಗಾಗಿ 3ಲಕ್ಷದ ಗುರಿಯನ್ನು ತಲುಪುತ್ತೇವೆ ಎನ್ನುವ ವಿಶ್ವಾಸ ಹೊಂದಬೇಕು ಎಂದು ಸಂಸದ ಕಟೀಲ್ ಕಾರ್ಯಕರ್ತರಿಗೆ ಕರೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಶ್ರೀನಿವಾಸ ಪೂಜಾರಿ, ಭಾರತವು ನರೇಂದ್ರ ಮೋದಿಯವರ ಆಡಳಿತದಲ್ಲಿ ಜಗತ್ತಿನ ಆರ್ಥಿಕವಾಗಿ ಬೆಳೆದಿರುವ ಬಲಿಷ್ಠ 3 ರಾಷ್ಟ್ರಗಳಲ್ಲಿ ಒಂದು ಎನ್ನುವ ರೀತಿಯಲ್ಲಿ ನಾವು ಬೆಳೆದು ನಿಂತಿದ್ದೇವೆ. ಸಮರ್ಥ, ಸಮೃದ್ಧ, ಶಕ್ತಿಶಾಲಿ, ಸ್ವಾಭಿಮಾನಿ ಭಾರತವನ್ನು ನಿರ್ಮಾಣ ಮಾಡಬೇಕೆನ್ನುವ ಪರಿಕಲ್ಪನೆಗೆ ಒತ್ತುಕೊಟ್ಟು, ಸಮರ್ಪಣಾ ಮನೋಭಾವದಿಂದ ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆ ದೇಶಕ್ಕೋಸ್ಕರ ನರೇಂದ್ರ ಮೋದಿಯವರಿಗೆ ಮತ ಹಾಕಬೇಕು ಎಂದು ಹೇಳಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿ, ಮಂಗಳೂರು – ಮುಂಬಯಿ ನಡುವೆ ನೇರ ಸಂಬಂಧ ಇದೆ. ಮುಂಬಯಿ ಯಲ್ಲಿ ನೆಲೆಸಿರುವ ಸಾವಿರಾರು ಜನರ ಮೂಲ ಈ ನೆಲ. 2024 ಚುನಾವಣೆ ಇತಿಹಾಸ ನಿರ್ಮಿಸಲಿದೆ. ಕಳೆದ 10 ವರ್ಷಗಳಲ್ಲಿ ಮೋದಿ ಅವರ ನೇತೃತ್ವದ ಸರಕಾರ ಮಾಡಿದ ಅಭಿವೃದ್ದಿ ಈ ಹಿಂದಿನ ಯಾವುದೇ ಸರಕಾರ ಮಾಡಿಲ್ಲ. ದೇಶದಲ್ಲಿ ಮೂಲಭೂತ ಸೌಕರ್ಯ. ದೇಶದ ಅಭಿವೃದ್ದಿ ದೃಷ್ಠಿಯಿಂದ 2022-29ರ ಅವಧಿ ಅತ್ಯಂತ ಮುಖ್ಯ. ಇಲ್ಲಿವರೆಗೆ ದೇಶದ ವ್ಯವಸ್ಥೆ ಸರಿಮಾಡಲು ಕಳೆದು ಹೋಗಿದೆ. ಇದುವರೆಗೆ ನೋಡಿದ್ದು ಕೇವಲ ಟ್ರೈಲರ್, ಇನ್ನೂ ಪಿಚ್ಚರ್ ಬಾಕಿಯಿದೆ. ಆ್ಯಂಟಿ ಇಂಡಿಯಾ ಶಕ್ತಿಗಳಿಗೆ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರಕಾರ ಸಪೋರ್ಟ್ ಮಾಡುತ್ತಿದೆ. ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಪಾಕ್ ಪರ ಘೋಷಣೆ ಕೂಗಲಾಗುತ್ತದೆ. ಬಾಂಬ್ ಸ್ಪೋಟ ನಡೆಸಲಾಗುತ್ತದೆ. ದೇಶ ವಿರೋಧಿ ಶಕ್ತಿಗಳು ಇಲ್ಲಿ ಬಲಗೊಳ್ಳುತ್ತಿದೆ. ಕಾಂಗ್ರೆಸ್ ಗೆ ಯಾವ ನಿಯತ್ತು ಇದೆ ಎಂಬುದು ಸ್ಪಷ್ಟವಾಗುತ್ತಿದೆ. ಮತ ಬ್ಯಾಂಕ್ ಗಾಗಿ ದೇಶದ ಬಗ್ಗೆ ಕಾಂಗ್ರೆಸ್ ಚಿಂತಿಸಲ್ಲ. ಇಂಡಿ ಅಲಾಯನ್ಸ್ ದೇಶ ವಿರೋಧಿಗಳನ್ನು ಸಮರ್ಥಿಸುತ್ತದೆ. ದೇಶದ ವಿರೋಧಿಗಳ ರಕ್ಷಣೆ ಮಾಡಲಾಗುತ್ತಿದೆ. ಈ ಬಾರಿ ಚುನಾವಣೆಗೆ ಬಿಜೆಪಿಗೆ ಓಟ್ ಅಲ್ಲ. ಭಾರತ್ ಗಾಗಿ ಓಟ್ ಮಾಡಬೇಕು. ದೇಶದ ಭವಿಷ್ಯಕ್ಕಾಗಿ ಓಟ್ ಮಾಡಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಜಿಲಾಧ್ಯಕ್ಷ ಸತೀಶ್‌ ಕುಂಪಲ, ಶಾಸಕ ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ಹರೀಶ್‌ ಪೂಂಜಾ, ಶಾಸಕಿ ಭಾಗಿರಥಿ ಮುರುಳ್ಯ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here