ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿ ಪ್ರಕಟಿಸಿದ ಚುನಾವಣಾ ಆಯೋಗ 

ಮಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಂಚಿಕೊಂಡಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ಚುನಾವಣಾ ಆಯೋಗವು ಗುರುವಾರ(ಮಾ.14) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸುವವರಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಸೇರಿವೆ ಎಂದು ಡೇಟಾ ಬಹಿರಂಗಪಡಿಸಿದೆ.

ಎಸ್‌ಬಿಐ ಈ ಡೇಟಾವನ್ನು ಎರಡು ಸೆಟ್‌ಗಳಲ್ಲಿ ಪೂರೈಸಿದೆ. ಮೊದಲ ಸೆಟ್ ಪ್ರತಿ ಎಲೆಕ್ಟೋರಲ್ ಬಾಂಡ್‌ನ ಖರೀದಿಯ ದಿನಾಂಕ, ಬಾಂಡ್‌ನ ಖರೀದಿದಾರರ ಹೆಸರು ಮತ್ತು ಖರೀದಿಸಿದ ಬಾಂಡ್‌ನ ಮುಖಬೆಲೆಯನ್ನು ಒಳಗೊಂಡಿರುತ್ತದೆ. ಏಪ್ರಿಲ್ 1, 2019 ಮತ್ತು ಫೆಬ್ರವರಿ 15, 2024 ರ ನಡುವೆ ಒಟ್ಟು 22,217 ಬಾಂಡ್‌ಗಳನ್ನು ಖರೀದಿಸಲಾಗಿದೆ. ಈ ಚುನಾವಣಾ ಬಾಂಡ್​ನ ಮಾಹಿತಿಯಲ್ಲಿ ಯಾರು ದಾನ ಮಾಡಿದ್ದನ್ನು ಯಾವ ಪಕ್ಷ ಪಡೆದುಕೊಂಡಿದೆ ಎಂಬ ಮಾಹಿತಿ ಇಲ್ಲ. ದಾನಿ ಮತ್ತು ಪಕ್ಷಗಳ ನಡುವಿನ ನೇರ ವ್ಯವಹಾರದ ಮಾಹಿತಿಯನ್ನು ಕೊಟ್ಟಿಲ್ಲ. ಒಟ್ಟಾರೆ ಎಷ್ಟು ಬಾಂಡ್​ಗಳಿವೆ, ಅವುಗಳ ಬೆಲೆ, ಎಷ್ಟು ಬಾಂಡ್​ಗಳನ್ನು ಪಕ್ಷಗಳು ನಗದು ಮಾಡಿಕೊಂಡಿವೆ ಎಂಬ ಮಾಹಿತಿಯಷ್ಟೇ ಇದೆ. ಒಟ್ಟು ಮಾಹಿತಿಯನ್ನು ನೂರಾರು ಪುಟಗಳಲ್ಲಿ ನೀಡಲಾಗಿದೆ.

ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರಲ್ಲಿ ಅಗ್ರ ಸ್ಥಾನದಲ್ಲಿ ಇರುವವರು, ಗ್ರಾಸಿಮ್ ಇಂಡಸ್ಟ್ರೀಸ್ , ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್‌ನಂತಹ ದೊಡ್ಡ ಕಂಪನಿಗಳ ಹೆಸರುಗಳು ಸೇರಿವೆ. ಅಪೊಲೊ ಟೈರ್ಸ್ , ಲಕ್ಷ್ಮಿ ಮಿತ್ತಲ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್ , ಸುಲಾ ವೈನ್, ವೆಲ್‌ಸ್ಪನ್, ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಸನ್ ಫಾರ್ಮಾ ಮುಂತಾದ ಹೆಸರುಗಳನ್ನು ಒಳಗೊಂಡಿದೆ. ಟೊರೆಂಟ್ ಪವರ್ , ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್ ಅಗ್ರ ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಪಿರಮಲ್ ಎಂಟರ್‌ಪ್ರೈಸಸ್ ಲಿಮಿಟೆಡ್, ಮುತ್ತೂಟ್ ಫೈನಾನ್ಸ್ ಲಿಮಿಟೆಡ್, ಪೆಗಾಸಸ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್, ಫಿನೋಲೆಕ್ಸ್ ಕೇಬಲ್ಸ್ ಲಿಮಿಟೆಡ್, ಲಕ್ಷ್ಮಿ ನಿವಾಸ್ ಮಿತ್ತಲ್, ಎಡೆಲ್‌ವೀಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಜಿಎಚ್‌ಸಿಎಲ್ ಲಿಮಿಟೆಡ್, ಜಿಂದಾಲ್ ಪಾಲಿ ಫಿಲ್ಮ್ಸ್ ಲಿಮಿಟೆಡ್, ವೇದಾಂತ ಲಿಮಿಟೆಡ್, ವೇದಾಂತ ಲಿಮಿಟೆಡ್ ಕೂಡ ಸೇರಿವೆ.

ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಎಸ್‌ಬಿಐನಿಂದ ಸ್ವೀಕರಿಸಿದ ವಿವರಗಳನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಗಡುವಿಗೆ ಇನ್ನು ಒಂದು ದಿನ ಇರುವಾಗಲೇ ಮಾಹಿತಿಯನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಸುಪ್ರೀಂ ಕೋರ್ಟ್​ ಚಾಟಿ ಬಳಿಕ ಎಚ್ಚೆತ್ತುಕೊಂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ಚುನಾವಣಾ ಆಯೋಗಕ್ಕೆ ಎಲ್ಲಾ ಚುನಾವಣಾ ಬಾಂಡ್​ಗಳ ಡೇಟಾವನ್ನು ಸಲ್ಲಿಸಿತು. ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗಾಗಿ ಎಲ್ಲಾ ಡೇಟಾವನ್ನು ಅಪ್‌ಲೋಡ್ ಮಾಡಿದೆ. ಡೇಟಾವನ್ನು ಪರಿಶೀಲಿಸಲು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ eci.gov.in ಗೆ ಭೇಟಿ ನೀಡಬಹುದು.

Electoral Bonds submitted by SBI Part- II

LEAVE A REPLY

Please enter your comment!
Please enter your name here