ಬಿಜೆಪಿ – ಪುತ್ತಿಲ ಪರಿವಾರ ಜೊತೆಯಾಗಿ ಕೆಲಸ ಮಾಡಲಿದೆ-ಕಾರ್ಯಕರ್ತರ ಭಾವನೆಗೆ ಪೂರಕವಾದ ಹುದ್ದೆಯನ್ನು ಪಕ್ಷ ನೀಡುತ್ತದೆನ್ನುವ ವಿಶ್ವಾಸವಿದೆ-ಅರುಣ್ ಕುಮಾರ್ ಪುತ್ತಿಲ

ಮಂಗಳೂರು: ಮೋದಿಯವರು ಅಭಿವೃದ್ಧಿ ರಾಜಕಾರಣ ಮಾಡಿರುವುದು ನಮ್ಮ ಕಣ್ಣ ಮುಂದಿದ್ದು, ದೇಶಕ್ಕೆ, ಪ್ರಧಾನಿಯವರಿಗೆ ಶಕ್ತಿ ತುಂಬಬೇಕಾದ ಕಾಲಘಟ್ಟದಲ್ಲಿ ಬಂದು‌ ನಿಂತಿದ್ದೇವೆ. ಕಾರ್ಯಕರ್ತರ ಭಾವನೆಗೆ ಪೂರಕವಾಗಿ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೆ.ಈಗ ಮೋದಿಯವರ ಕೈಯನ್ನು ಬಲಪಡಿಸಲು ಬಿಜೆಪಿ – ಪುತ್ತಿಲ ಪರಿವಾರ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಪುತ್ತೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಸುದ್ದಿ ಜೊತೆಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಜೊತೆಗೆ ನಾವು ಸೇರಿಕೊಂಡಿದ್ದೇವೆ. ಪಕ್ಷವು ಬ್ರಿಜೇಶ್ ಚೌಟರನ್ನು ಅಭ್ಯರ್ಥಿಯನ್ನಾಗಿ ನಮಗೆ ನೀಡಿದೆ. ಅವರನ್ನು ಗೆಲ್ಲಿಸಬೇಕಾದ ಜವಾಬ್ದಾರಿ‌ ನಮ್ಮ ಮುಂದಿದೆ. ಕಾರ್ಯಕರ್ತರ ಭಾವನೆಗೆ ಪೂರಕವಾದ ಹೆಜ್ಜೆಯನ್ನು ಇಟ್ಟಿದ್ದೇವೆ. ರಾಮ ಮಂದಿರ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿದೆ. ಕಾರ್ಯಕರ್ತರ ಭಾವನೆಗೆ ಶಕ್ತಿ ತುಂಬುವ ಕೆಲಸ ಪಕ್ಷ ಮಾಡುತ್ತದೆನ್ನುವ ವಿಶ್ವಾಸ ಇದೆ. ಕಾರ್ಯಕರ್ತರ ಭಾವನೆಗೆ ಪೂರಕವಾದ ಹುದ್ದೆಯನ್ನು ಪಕ್ಷ ನೀಡುತ್ತದೆನ್ನುವ ವಿಶ್ವಾಸ ಇದೆ.ಪುತ್ತಿಲ ಪರಿವಾರ ಟ್ರಸ್ಟ್ ಮೂಲಕ ಸಮಾಜ ಸೇವಾ ಕೆಲಸಗಳು ಮುಂದುವರೆಯುತ್ತದೆ. ನಮ್ಮ ಜೊತೆಗೆ ಕಾರ್ಯಕರ್ತರು ಕೂಡ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here