



ಮಂಗಳೂರು: ಅಸ್ತಿತ್ವದ ಸಹಯೋಗದಲ್ಲಿ ಆರು ದಿನಗಳ ಕಾಲ ನಡೆಯುವ ‘ನೇಹದಿ ನೇಯ್ಗೆ’ ನಿರ್ದಿಗಂತ ರಂಗೋತ್ಸವ ಕಾರ್ಯಕ್ರಮ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ನೆರವೇರಿತು.







ಕಾರ್ಯಕ್ರಮಕ್ಕೆ ಖ್ಯಾತ ಹಿಂದಿ ಚಲನಚಿತ್ರ ನಟ ನಾನಾ ಪಾಟೇಕರ್ ಚಾಲನೆ ನೀಡಿ ಶುಭಹಾರೈಸಿದರು. ಈ ವೇಳೆ ಕೆ.ಪಿ ಲಕ್ಷ್ಮಣ ನಿರ್ದೇಶನದ, ಬೆಂಗಳೂರು ಜಂಗಮ ಕಲೆಕ್ಟಿವ್ ಪ್ರಸ್ತುತಿಯ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರ ನಟ ಪ್ರಕಾಶ್ ರಾಜ್, ಸೈಂಟ್ ಅಲೋಶಿಯಸ್ ಪ್ರಾಂಶುಪಾಲ ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್ ಜೆ ಮತ್ತಿತರರು ಉಪಸ್ಥಿತರಿದ್ದರು.















