ಗಾಳಿಯ ರಭಸಕ್ಕೆ ಮೀನು ಹಿಡಿಯಲು‌ ತೆರಳಿದ್ದ ಯುವಕ ಸಮುದ್ರ ಪಾಲು

ಮಂಗಳೂರು: ತಂದೆಯೊಂದಿಗೆ ಮಂಗಳೂರಿನ ತೋಟ ಬೆಂಗ್ರೆ ಬಳಿ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಪ್ರಜೀತ್ ಎಂ ತಿಂಗಳಾಯ ಎಂಬ ಯುವಕ ಸಮುದ್ರದ ಸೆಳೆತಕ್ಕೆ ಸಿಕ್ಕಿ ಮೃತಪಟ್ಟ ಘಟನೆ ಮಾ.21ರಂದು ನಡೆದಿದೆ.

ಮೃತ ಯುವಕ ಬೆಂಗ್ರೆಯ ಮಿಥುನ ಎಂಬವರ ಪುತ್ರನಾಗಿದ್ದು, ತಂದೆಯೊಂದಿಗೆ ನೆಗರ್ ಬಲೆಯಲ್ಲಿ ಮೀನು ಹಿಡಿಯಲು ಬಂದಿದ್ದ. ಈ ವೇಳೆ ಗಾಳಿ ರಭಸಕ್ಕೆ ಸಿಕ್ಕಿ, ಪ್ರಜೀತ್ ಸಮುದ್ರ ಪಾಲಾಗಿದ್ದಾನೆ. ಸುಮಾರು ಒಂದು ಗಂಟೆಯ ಬಳಿಕ ಆತನ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here