ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ದೈತ್ಯ ಕಾಳಿಂಗ ಸರ್ಪ

ಮಂಗಳೂರು : ಪಂಜರದಲ್ಲಿದ್ದ ದೈತ್ಯ ಕಾಳಿಂಗ ಸರ್ಪವೊಂದು ತಪ್ಪಿಸಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ಜೈವಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು ತಪ್ಪಿಸಿಕೊಂಡ ಈ ಹೆಣ್ಣು ಕಾಳಿಂಗ ಸರ್ಪ ರಸ್ತೆ ದಾಟಿ ವಿಜ್ಞಾನ ಸೆಂಟರ್​ನತ್ತ ಸಾಗುತ್ತಿತ್ತು. ಸಾರ್ವಜನಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ನಿಸರ್ಗಧಾಮದ ಸಿಬ್ಬಂದಿ ಧಾವಿಸಿ ಅದನ್ನು ಸೆರೆ ಹಿಡಿದು ಮರಳಿ ಪಂಜರಕ್ಕೆ ಹಾಕಿದ್ದಾರೆ. ಈಗ ಸಂತನೋತ್ತಿಯ ಸಮಯವಾಗಿದ್ದು ಒಂದು ಹೆಣ್ಣು ಮತ್ತು ಗಂಡು ಗಾಳಿಂಗ ಸರ್ಪಗಳು ಕಾದಾಟ ಮಾಡುತ್ತಿದ್ದಾಗ ಪಂಜರದ ಮೆಶ್ ಲಿಂಕ್ ತಪ್ಪಿ ಈ ಹೆಣ್ಣು ಕಾಳಿಂಗ ಸರ್ಪ ಹೊರಕ್ಕೆ ತಪ್ಪಿಸಿ ಹೋಗಿದ್ದು ಇದನ್ನು ಗಮನಿಸಿದ ಸಿಬಂದಿ ಕೂಡಲೇ ಹಿಡಿದು ಸಂತಾನೋತ್ಪತ್ತಿ ಕೇಂದ್ರಕ್ಕೆ ಸಾಗಿಸಿದ್ದಾರೆ.

ಸಂತನೋತ್ಪತ್ತಿ ಸಂದರ್ಭ ಕಾಳಿಂಗ ಸರ್ಪಗಳ ಈ ಕಾದಾಟ ಒಂದು ಸಹಜ ಪ್ರಕ್ರೀಯೆ ಆಗಿದೆ. ತಪ್ಪಿಸಿಕೊಂಡ ಹೆಣ್ಣು ಕಾಳಿಂಗ ಆರು ವರ್ಷ ವಯಸ್ಸಾಗಿದ್ದು ಸುಮಾರು 8 ಅಡಿ ಉದ್ದವಿದೆ. ಹೆಣ್ಣು ಕಾಳಿಂಗ ಸಪೂರವಿದ್ದ ಕಾರಣ ಹೊರಗೆ ಹೋಗಿತ್ತು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ ಮಾಹಿತಿ ನೀಡಿದ್ದಾರೆ. ದೇಶದ ದೊಡ್ಡ 17 ಮೃಗಾಲಯಗಳ ಪೈಕಿ ಇದು ಕೂಡ ಒಂದು. ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್​ ಒನ್​​ ಎಂಬ ಗೌರವಕ್ಕೂ ಪಾತ್ರವಾಗಿದೆ. ಅಳಿವಿನಂಚಿನ ಸೇರಿ ಅಪರೂಪದ ಹುಲಿ, ಕಾಳಿಂಗ, ಸೇರಿದಂತೆ ಅನೇಕ ಅಪರೂಪದ ಪ್ರಾಣಿ ಮತ್ತು ಪಕ್ಷಿ ಸಂಕುಲ ಇಲ್ಲಿ ಇದ್ದು ಸಂತಾನಾಭಿವೃದ್ಧಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

LEAVE A REPLY

Please enter your comment!
Please enter your name here