ಮಂಗಳೂರು: ಅಮೃತ ಪ್ರಕಾಶನ ಪತ್ರಿಕೆ ವತಿಯಿಂದ ನಡೆದ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 39ನೇ ಕೃತಿ ಸಪ್ನ ದಿನಕರ್ ಅವರ ಮೌನದೊಳಗಿನ ಮಾತು ಕವನ ಸಂಕಲನವನ್ನು ಲೇಖಕಿ, ವಿಮರ್ಶಕಿ ವಿದ್ಯಾ ನಾಯಕ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಮಂಗಳೂರು ಅಧ್ಯಕ್ಷ ಪಿ.ಬಿ ಹರೀಶ್ ರೈ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯುಗ ಪುರುಷ ಪತ್ರಿಕೆ ಸಂಪಾದಕ ಕುಡೆತ್ತೂರು ಭುವನಾಭಿರಾಮ ಉಡುಪ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಲೇಖಕಿ ವೀಣಾ ಟಿ. ಶೆಟ್ಟಿ ಹಾಗೂ ಸುಧಾ ನಾಗೇಶ್ ಉಪಸ್ಥಿತರಿದ್ದರು. ಕೃತಿಯ ಲೇಖಕಿ ಸಪ್ನ ದಿನಕರ್, ಅಮೃತ ಪ್ರಕಾಶನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.