ಮಂಗಳೂರು(ಹೈದರಾಬಾದ್): ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ತಯಾರಿಕಾ ಕಂಪನಿಯೊಂದರ ರಿಯಾಕ್ಟರ್‌ನಲ್ಲಿ ಎ.3ರಂದು ಸಂಭವಿಸಿದ ಸ್ಫೋಟದಿಂದ ನಾಲ್ವರು ಮೃತಪಪಟ್ಟಿದ್ದು, 10 ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡಿದೆ. ರಿಯಾಕ್ಟರ್ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸುತ್ತಲಿದ್ದ ಜನರನ್ನು ದೂರಕ್ಕೆ ಚಿಮ್ಮುವಂತೆ ಮಾಡಿತು. ಇದುವರೆಗೆ 10–15 ಜನರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Reactor blast in a chemical company in Sangareddy district, #Telangana. 4 bodies recovered, 10 suffered third degree burns.
Five fire tenders on the spot. Rescue ops underway.@TOIHyderabad @spsangareddy @Collector_SRD @TelanganaFire pic.twitter.com/4rB2rNBI40— Pinto Deepak (@PintodeepakD) April 3, 2024