ಅಭ್ಯರ್ಥಿಗಿಂತ ಪಕ್ಷ ಮತ್ತು ದೇಶ ಮುಖ್ಯ-ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್

ಮಂಗಳೂರು: ಅನೇಕ ಚುನಾವಣೆಗಳು ನಮ್ಮ ಮುಂದೆ ಬಂದಿದೆ. ಆದ್ರೆ ಇದು ದೇಶದ ಚುನಾವಣೆಯಾಗಿದೆ. ಇದು ದೇಶದ ಭವಿಷ್ಯದ ಚುನಾವಣೆ. ಇಲ್ಲಿ ಅಭ್ಯರ್ಥಿಗಿಂತ ಪಕ್ಷ ಮತ್ತು ದೇಶವನ್ನು ನೋಡಬೇಕು ಎಂದು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಆಳ್ವಿಕೆ ಮಾಡಿದೆ. ಈ ಹಿಂದೆ ಕಾಂಗ್ರೆಸ್ ಮರವನ್ನು ನಿಲ್ಲಿಸಿದರು ಗೆಲ್ಲುತ್ತೇವೆ ಎನ್ನುತ್ತಿದ್ದರು. ಆದ್ರೆ ಈಗಾ ಅದು ಬದಲಾಗಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನು ಗೆಲ್ಲುತ್ತಾನೆ. ಕಳೆದ ನಲವತ್ತು ವರ್ಷಗಳಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ಮತ ನೀಡಿದ್ದಾರೆ. ಈ ದೇಶದಲ್ಲಿ ಹುಟ್ಟಿ ಬೆಳೆದು‌ ಬೇರೆ ದೇಶಗಳಿಗೆ ಜೈಕಾರ ಹಾಕುವವರು, ದೇಶದಲ್ಲಿ ಭಯೋತ್ಪಾದನ ಕೃತ್ಯ ಮಾಡುವವರನ್ನು ತಡೆಯಲು ಮತ್ತೊಮ್ಮೆ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಆಗಬೇಕಾಗಿದೆ. ಕಳೆದ ಹದಿನೈದು ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಳಿನ್ ಕುಮಾರ್ ಕಟೀಲ್ ಮಾಡಿದ್ದಾರೆ. ಈ‌ ಬಾರಿ ಯುವ ನಾಯಕನಿಗೆ ಬಿಜೆಪಿ ಅಭ್ಯರ್ಥಿ ಸ್ಥಾನ ನೀಡಿದೆ. ನಾಳೆ ಜಿಲ್ಲೆಗೆ ಪ್ರದಾನಿ ಮೋದಿ ಜೀ ಭೇಟಿ ನೀಡಲಿದ್ದು,ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ನಾರಾಯಣ ಗುರು ವೃತ್ತದಿಂದ ಮೋದಿ ಜೀ ಅವರ ಬೃಹತ್ ರೋಡ್ ಶೋ ನಡೆಯಲಿದೆ ಎಂದು ಉಮಾನಾಥ್ ಕೋಟ್ಯಾನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here