ಮಂಗಳೂರು(ಜಮ್ಮುಕಾಶ್ಮೀರ): ಕಾರೊಂದು ಕಂದಕಕ್ಕೆ ಬಿದ್ದು 4 ವರ್ಷ ಬಾಲಕಿ ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಸಂಜೆ(ಏ.13 ರಂದು) ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.
ಕಾರು ಥಾತ್ರಿಯಿಂದ ಕಥಾವಾಕ್ಕೆ ತೆರಳುತ್ತಿದ್ದಾಗ ಖಾನ್ಪುರದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಕಾರು ಸ್ಕಿಡ್ ಆಗಿ ಆಳವಾದ ಕಂದಕಕ್ಕೆ ಬಿದ್ದಿದ್ದು, ಪರಿಣಾಮ ಮಹಿಳೆ ಮತ್ತು 4 ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತ ನಾಲ್ವರನ್ನು ಮುಖ್ತಿಯಾರ್ ಅಹ್ಮದ್, ರಿಯಾಜ್ ಅಹ್ಮದ್, ಮೊಹಮ್ಮದ್ ರಫಿ, ಇರೀನಾ ಬೇಗಂ ಎಂದು ಪೊಲೀಸರು ಗುರುತಿಸಿದ್ದಾರೆ. ನಾಲ್ಕು ವರ್ಷದ ಬಾಲಕಿ, ಮೊಹಮ್ಮದ್ ಅಮೀರ್ ಮತ್ತು ಸೈಮಾ ದಂಪತಿಯ ಪುತ್ರಿಯಾಗಿದ್ದು, ಮೊಹಮ್ಮದ್ ಅಮೀರ್ ಮತ್ತು ಸೈಮಾ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಇತರರಲ್ಲಿ ಸೂಫಿಯಾನ್ ಶೇಖ್ ಮತ್ತು ಇಬ್ಬರು ಹುಡುಗಿಯರು ಸೇರಿದ್ದಾರೆ.