ಮಂಗಳೂರು(ಬೆಂಗಳೂರು): ನೇಹಾ–ಫಯಾಜ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ, ನೇಹಾಳನ್ನು ಹತ್ಯೆ ಮಾಡುವ ಮೂಲಕ ನನ್ನ ಮಗ ತಪ್ಪು ಮಾಡಿದ್ದಾನೆ. ಆತನಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದು ಫಯಾಜ್ ಅವರ ತಾಯಿ ಮುಮ್ತಾಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮಗ ಮಾಡಿದ ತಪ್ಪಿಗೆ ನಾನು ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ. ನೇಹಾ ಕೂಡ ನನ್ನ ಮಗಳು ಇದ್ದಂತೆ. ಅವರ ತಂದೆ–ತಾಯಿಗೆ ಎಷ್ಟು ದುಃಖ ಆಗಿದಿಯೋ ಅಷ್ಟೇ ದುಃಖ ನಮಗೂ ಆಗಿದೆ’ ಎಂದು ಹೇಳಿದ್ದಾರೆ. ಫಯಾಜ್, ದೇಹದಾಢ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ ಯೂನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದ. ಆದಾದ ಬಳಿಕ ನೇಹಾಳೇ ಖುದ್ದಾಗಿ ಫಯಾಜ್ ಬಳಿ ಮೊಬೈಲ್ ನಂಬರ್ ತೆಗೆದುಕೊಂಡಿದ್ದಳು. ಮೊದಲಿಗೆ ಆಕೆಯೇ ನನ್ನ ಮಗನಿಗೆ ಪ್ರಪೋಸ್ ಮಾಡಿದ್ದಳು. ಒಂದು ವರ್ಷದ ಹಿಂದೆ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಫಯಾಜ್ ನನ್ನ ಬಳಿ ಹೇಳಿಕೊಂಡಿದ್ದ ಎಂದು ಮುಮ್ತಾಜ್ ಹೇಳಿದ್ದಾರೆ. ಫಯಾಜ್, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಚೆನ್ನಾಗಿ ಓದುತ್ತಿದ್ದ, ಶೇ 90ರಷ್ಟು ಅಂಕಗಳನ್ನು ಪಡೆದಿದ್ದ. ಹಾಗಾಗಿ ಆತನನ್ನು ಐಎಎಸ್ ಮಾಡಿಸಬೇಕು ಎಂದು ಕನಸು ಕಂಡಿದ್ದೆ. ಆದರೆ, ಪ್ರೀತಿಯಲ್ಲಿ ಬಿದ್ದ ಬಳಿಕ ಆತ ಓದಿನಲ್ಲಿ ಹಿಂದುಳಿದಿದ್ದ ಎಂದು ಮುಮ್ತಾಜ್ ಕಣ್ಣೀರು ಹಾಕಿದ್ದಾರೆ. ನೇಹಾ ಒಳ್ಳೆಯ ಹುಡುಗಿ. ಆಕೆಯನ್ನು ಕೊಲೆ ಮಾಡಿ ತಪ್ಪು ಮಾಡಿರುವ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಮುಮ್ತಾಜ್ ಒತ್ತಾಯಿಸಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Dharwad, Karnataka: In the Neha Hiremath murder case, the accused Fayaz's mother issued a statement apologizing to the state. pic.twitter.com/9V32wtXd0h
— IANS (@ians_india) April 20, 2024