



ಮಂಗಳೂರು(ಸುಳ್ಯ): ವ್ಯಕ್ತಿಯೊಬ್ಬರು ಮರ ಕಡಿಯುತ್ತಿದ್ದ ವೇಳೆ ಮರದ ಕೊಂಬೆಯ ನಡುವೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸುಳ್ಯದ ಕುರುಂಜಿಗುಡ್ಡೆಯಲ್ಲಿ ಇಂದು(ಎ.30) ನಡೆದಿದೆ.







ಬೆಳ್ಯಪ್ಪ ನಾಯ್ಕ ಕೇರ್ಪಳ ಮನೆ ಮೃತಪಟ್ಟವರು. ಮರ ಕಡಿಯುತ್ತಿದ್ದ ವೇಳೆ ಕೊಂಬೆಗಳ ನಡುವೆ ಸಿಲುಕಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.















