ಗಂಡನಿಗೆ ವಿಚ್ಛೇದನ ನೀಡಿ ಮನೆ ಬಿಟ್ಟು ಬಂದ ಮಗಳನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆತಂದ ತಂದೆ

ಮಂಗಳೂರು(ಬೆಂಗಳೂರು): ಮಗಳ ವಿಚ್ಛೇದನದ ಬಳಿಕ ಬ್ಯಾಂಡ್ ಬಾಜಾದೊಂದಿಗೆ ಮಗಳನ್ನು ಮರಳಿ ಮನೆಗೆ ಕರೆ ತಂದ ಘಟನೆಯೊಂದು ಕಾನ್ಪುರದಲ್ಲಿ ನಡೆದಿದ್ದು, ದೇಶದಾದ್ಯಂತ ಭಾರಿ ಸದ್ದು ಮಾಡಿದೆ.

ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಎಂಜಿನಿಯರ್ ಆಗಿರುವ ಅನಿಲ್ ಅವರ ಪುತ್ರಿ ಉರ್ವಿ (36) ಅವರಿಗೆ 2016ರಲ್ಲಿ ಕಂಪ್ಯೂಟರ್ ಎಂಜಿನಿಯರ್ ಒಬ್ಬನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಉರ್ವಿ ದಂಪತಿ ದೆಹಲಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗಳು ಇದ್ದಾಳೆ. ಆದರೆ ಉರ್ವಿಯ ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಫೆ. 28ರಂದು ಅವರು ವಿವಾಹ ವಿಚ್ಛೇದನ ಪಡೆದಿದ್ದಾರೆ. ಎಂಟು ವರ್ಷಗಳ ಚಿತ್ರಹಿಂಸೆ, ಹೊಡೆತ ಮತ್ತು ನಿಂದನೆಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಕೊನೆಗೆ ಮದುವೆ ಮುರಿಯುವ ನಿರ್ಧಾರ ಮಾಡಿದೆ ಎಂದು ಉರ್ವಿ ಹೇಳಿದ್ದಾರೆ. ತಂದೆ, ಮಗಳ ವಿಚ್ಚೇದನವನ್ನು ಬ್ಯಾಂಡ್ ಬಾಜಾದೊಂದಿಗೆ ಆಚರಿಸಿ ಸಂಭ್ರಮಿಸಿದ್ದಾರೆ. ವಿಚ್ಛೇದನದ ಬಳಿಕ ಮಗಳು ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಸಮಾಜದ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಮಗಳಿಗೆ ಯಾವುದೇ ಸಾಮಾಜಿಕ ಕಳಂಕ ಬಾರದೇ ಇರಲಿ ಎಂದು ತಂದೆಯೊಬ್ಬರು ಸ್ಫೂರ್ತಿದಾಯಕ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here