ಕರ್ನಾಟಕದ ಕರಾವಳಿ, ಗುಜರಾತ್, ತೆಲಂಗಾಣ ಸಹಿತ ಹಲವು ಕಡೆ ಬಿಸಿ ಗಾಳಿ-ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಮಂಗಳೂರು:  ಕರ್ನಾಟಕದ ಕರಾವಳಿಯಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಿದ್ದು ಭಾರತೀಯ ಹವಮಾನ ಇಲಾಖೆ ಆರೆಂಜ್ ಅಲೆರ್ಟ್ ಘೋಷಿಸಿದೆ.

ಮೇ.6 ಮತ್ತು 7 ರಂದು ಹೀಟ್ ವೇವ್ ಅಪ್ಪಳಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದ್ದು 40ಡಿಗ್ರಿ ತಾಪಮಾನ ದಾಖಲಿಸಿದೆ. ಮೇ.6ರ ಮಧ್ಯಾಹ್ನ 1 ಗಂಟೆಯಿಂದ ಮೇ.7 ರ ವರೆಗೆ ಹೀಟ್ ವೇವ್ ಇರಲಿದೆ. ಕರ್ನಾಟಕದ ಕರಾವಳಿ, ಗುಜರಾತ್, ತೆಲಂಗಾಣ ಸಹಿತ ಹಲವು ಕಡೆ ಬಿಸಿ ಗಾಳಿಯ ಎಫೆಕ್ಟ್ ಇರಲಿದೆ. ಜನತೆ ಆದಷ್ಟು ಬಿಸಿ ಗಾಳಿಯ ಸಂದರ್ಭ ಬಿಸಿಲಿನಲ್ಲಿ ಸಂಚರಿಸುವುದನ್ನು ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ತೇವಾಂಶದ ಆಹಾರ ಅನುಸರಿಸಬೇಕು ಮತ್ತು ನೀರು ಕಡಿಯಬೇಕು ಮತ್ತು ಹಿರಿಯರು ಹೊರ ಬರದಂತೆ ತಿಳಿಸಿದೆ. ಲಿಂಬು ಜ್ಯೂಸ್ , ಮಜ್ಜಿಗೆ , ಅಕ್ಕಿ ನೀರು ಸಾಧ್ಯವಾದಷ್ಟು ಸೇವಿಸಿ ತೇವಾಂಶ ಕಾಪಾಡುವಂತೆ ಮಾಹಿತಿ ನೀಡಿದೆ.

 

LEAVE A REPLY

Please enter your comment!
Please enter your name here