ಮಂಗಳೂರು(ಭುವನೇಶ್ವರ್): ಒಡಿಶಾದ ಸರಕಾರಿ ಸಾರಿಗೆ ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತು ಬಿಗಿದಪ್ಪಿ ಕಿಸ್ ನೀಡುತ್ತಾ ರೋಮ್ಯಾನ್ಸ್ ಮಾಡಿದ ಜೋಡಿಯ ವಿಡಿಯೋ ಭಾರಿ ಕೋಲಾಹಲ ಎಬ್ಬಿಸುವುದರೊಂದಿಗೆ ಸರ್ಕಾರದ ಸಾರಿಗೆ ಬಸ್ನಲ್ಲಿ ಈ ರೀತಿಯ ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ.
ಒಡಿಶಾದ ಸಾರಿಗೆ ಬಸ್ನಲ್ಲಿ ಜೋಡಿ ರೋಮ್ಯಾನ್ಸ್ ಮಾಡಿ ಇದೀಗ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಒಡಿಶಾದ ರೂರ್ಕೆಲಾದಲ್ಲಿನ ಸಾರಿಗೆ ಬಸ್ನ ಪ್ರಯಾಣಿಕರಿಂದ ತುಂಬಿತ್ತು. ಇದೇ ಬಸ್ ಹತ್ತಿದ ಜೋಡಿ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದೆ. ಈ ಜೋಡಿಯ ಪಕ್ಕ ಮಹಿಳೆಯೊಬ್ಬರು ಕುಳಿತಿದ್ದಾರೆ. ಎದುರಿನ ಸೀಟುಗಳಲ್ಲೂ ಪ್ರಯಾಣಿಕರು ತುಂಬಿದ್ದಾರೆ. ಬಸ್ ಸಂಚಾರ ಆರಂಭಿಸಿದ ಕೆಲವೇ ಹೊತ್ತಲ್ಲಿ, ಜೋಡಿಗೆ ಬೆಡ್ ರೂಂನಲ್ಲಿ ಲೈಟ್ ಆಫ್ ಮಾಡಿದ ಅನುಭವ. ಕಿಸ್ಸಿಂಗ್ ಮೂಲಕ ಆರಂಭಗೊಂಡ ರೋಮ್ಯಾನ್ಸ್ ಯಾವುದೇ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ಮುಂದುವರಿದಿದೆ.
ಜೋಡಿ ಸಾರ್ವಜನಿಕ ಪ್ರದೇಶದಲ್ಲಿ ಸಭ್ಯತೆಯ ಗಡಿ ದಾಟಿ ಆಕಾಶ ತಲುಪುತ್ತಿದ್ದಂತೆ ಬಸ್ನಲ್ಲಿದ್ದ ಇತತರು ವಿಡಿಯೋ ಮಾಡ ತೊಡಗಿದ್ದಾರೆ. ಆದರೆ ಜೋಡಿಯ ರೋಮ್ಸಾನ್ಸ್ ಕಡಿಮೆಯಾಗಿಲ್ಲ. ಸುತ್ತ ಮುತ್ತ ಪ್ರಯಾಣಿಕರು ಕುಳಿತಿದ್ದರೂ ತಾವು ಏಕಾಂತದಲ್ಲಿ ರೋಮ್ಸಾನ್ಸ್ ಮಾಡುತ್ತಿರುವ ರೀತಿ ವರ್ತಿಸಿದ್ದಾರೆ. ಕೆಲ ಹೊತ್ತಿನ ಬಳಿಕ ವಿಡಿಯೋ ಮಾಡುತ್ತಿರುವುದು ಜೋಡಿಯ ಗಮನಕ್ಕೆ ಬಂದಿದ್ದು ಒಬ್ಬರಿಗೊಬ್ಬರು ಒರಗಿ ಕುಳಿತುಕೊಂಡು ಪ್ರಯಾಣ ಮುಂದುವರಿಸಿದ್ದಾರೆ. ಆದರೆ ನಿಗದಿತ ಜಾಗದಲ್ಲಿ ಜೋಡಿ ಬಸ್ನಿಂದ ಇಳಿಯುವ ಮೊದಲೇ ವಿಡಿಯೋ ಭಾರಿ ವೈರಲ್ ಆಗಿದೆ. ಸಾರ್ವಜನಿಕರು ಈ ಜೋಡಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
मेट्रो के बाद दिल्ली की बसों में भी अश्लीलता फैलाई जा रही हैं. जमकर रोमांस और फोरेप्ले चल रहा है. सोचिए बस में छोटे बच्चे और महिलाएँ भी मौजूद हैं। बावजूद इसके सॉफ्ट कॉर्न परोसा जा रहा है. pic.twitter.com/NivhIt5mkz
— Shubham Sharma (@Shubham_fd) May 13, 2024