ಮಂಗಳೂರು(ನವದೆಹಲಿ): ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಶೇಷ ಅಥವಾ ವಿಚಿತ್ರ ಕಾರಣದಿಂದಾಗಿ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಅದೇ ರೀತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಚೈನೀಸ್ ಕಲಾವಿದ ಕೈ ಗುವೊ ಕಿಯಾಂಗ್ ಎಂಬಾತ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತನ್ನ ಅಜ್ಜಿಯ ನೆನಪಿಗಾಗಿ ಈ ಏಣಿಯನ್ನು ಪಟಾಕಿಯನ್ನು ಬಳಸಿಕೊಂಡು ಆಕಾಶದಲ್ಲಿ ರಚನೆ ಮಾಡಿದ್ದಾನೆ. ವಿಡಿಯೋ ನೋಡಿದರೆ ಆಕಾಶಕ್ಕೆ ಏಣಿಯನ್ನು ಹಾಕುತ್ತಿರುವಂತೆ ಬಾಸವಾಗುತ್ತದೆ. ಪಟಾಕಿ ಸಿಡಿಸಿದಾಗ ಏಣಿಯ ಆಕಾರ ಪಡೆದು ಆಕಾಶಕ್ಕೆ ಚಿಮ್ಮುತ್ತದೆ. ಜುವಾನಿಟಾ ಬ್ರಾಡ್ರಿಕ್ ಎಂಬುವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ‘ಸ್ವರ್ಗಕ್ಕೆ ಮೆಟ್ಟಿಲು’ ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ. 1,650 ಅಡಿ ಏಣಿಯನ್ನು ಗನ್ ಪೌಡರ್ ತುಂಬಿದ ತಾಮ್ರದ ತಂತಿಯಿಂದ ಮಾಡಲಾಗಿದೆ ಎಂದು ವರದಿಯಾಗಿದೆ. 1957ರಲ್ಲಿ ಫುಜಿಯಾನ್ ಪ್ರಾಂತ್ಯದ ಕ್ವಾನ್ಝೌ ನಗರದಲ್ಲಿ ಜನಿಸಿದ ಕೈ ಗುವೊ ಕಿಯಾಂಗ್, ಪ್ರಸ್ತುತ ನ್ಯೂಯಾರ್ಕ್ನಲ್ಲಿ ವಾಸಿಸುತ್ತಿದ್ದಾರೆ. ವಿಡಿಯೋ ವೈರಲ್ ಆದ ನಂತರ ಸಾಕಷ್ಟು ಕಾಮೆಂಟ್ಗಳು ಮತ್ತು ಲೈಕ್ಗಳು ಬರುತ್ತಿವೆ. ವಿಡಿಯೋ ನೋಡಲು ತುಂಬಾ ಚೆನ್ನಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದು, ಕೈ ಗುವೊ ಕಿಯಾಂಗ್ ನನ್ನು ಹೊಗಳುತ್ತಿದ್ದಾರೆ. ಬೆಂಕಿ ಏಕೆ ಕೆಳಗೆ ಬೀಳಲಿಲ್ಲ ?, ನಿಮ್ಮ ಅಜ್ಜಿ ಇದನ್ನು ನೋಡಿ ಸಂತೋಷಪಡುತ್ತಾರೆ ಎಂದೂ ಕಮೆಂಟ್ ಮಾಡಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://x.com/i/status/1790130005944496305