ಮಹಿಳಾ ಪ್ರೊಫೆಸರ್ ರೀತಿ ಧ್ವನಿ ಬದಲಿಸಿ ಮಾತನಾಡಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ಮಂಗಳೂರು(ಮಧ್ಯಪ್ರದೇಶ): ಧ್ವನಿ ಬದಲಿಸುವ ಆ್ಯಪ್‌ ಬಳಸಿ ಮಹಿಳಾ ಪ್ರೊಫೆಸರ್ ಅಂತ ಬಿಂಬಿಸಿಕೊಂಡು 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ. ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಬ್ರಿಜೇಶ್ ಭುಶ್ವಾಹಾ ಧ್ವನಿ ಬದಲಿಸುವ ಆಪ್ ಬಳಸಿ ತಾನು ಮಹಿಳಾ ಟೀಚರ್ ಎಂದು ಬಿಂಬಿಸಿಕೊಂಡು ಮಧ್ಯಪ್ರದೇಶದ ಸಿಂಧಿ ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ.

ವಿದ್ಯಾರ್ಥಿನಿಯರಿಗೆ ಓದಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿದ್ಯಾರ್ಥಿ ವೇತನ ಕೊಡಿಸುತ್ತೇನೆ. ನಾನು ಹೇಳುವ ನಿರ್ಜನ ಜಾಗಕ್ಕೆ ಬಂದರೆ ಅಲ್ಲಿ ಒಬ್ಬ ವ್ಯಕ್ತಿ ಬಂದು ಬೈಕ್ ನಲ್ಲಿ ನನ್ನ ಬಳಿ ಕರೆದುಕೊಂಡು ಬರುತ್ತಾನೆ ಎಂದು ಹೇಳಿ ಮಹಿಳಾ ಧ್ವನಿಯಲ್ಲಿ ಮಾತನಾಡಿ ವಿದ್ಯಾರ್ಥಿನಿಯರನ್ನು ನಂಬಿಸುತ್ತಿದ್ದ. ವಿದ್ಯಾರ್ಥಿನಿಯರು ಬಂದಾಗ ಕಾಡಿಗೆ ಕರೆದೊಯ್ದು ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ.

ಬೈಕ್ ನಲ್ಲಿ ಬರುವಾಗ ಹೆಲ್ಮೆಟ್ ಧರಿಸಿ, ಕೈಗೆ ಗ್ಲೌಸ್ ಹಾಕುತ್ತಿದ್ದರಿಂದ ವಿದ್ಯಾರ್ಥಿನಿಯರಿಗೆ ಗುರುತು ಸಿಗುತ್ತಿರಲಿಲ್ಲ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ಆರೋಪಿಸಿದ್ದಾರೆ. ಮೊಬೈಲ್ ನಂಬರ್ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿ ತನ್ನ ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಎಸಗಿದ್ದು, ವಿದ್ಯಾರ್ಥಿನಿಯರನ್ನು ನಂಬಿಸಲು ಧ್ವನಿ ಬದಲಿಸುವ ಆ್ಯಪ್‌ ಬಳಸಿದ್ದಾಗಿ ಬಹಿರಂಗಪಡಿಸಿದ್ದಾನೆ.

LEAVE A REPLY

Please enter your comment!
Please enter your name here