ಜ್ಯುವೆಲ್ಲರಿ ಶಾಪ್ ಮೇಲೆ ಐಟಿ ದಾಳಿ-116 ಕೋಟಿಯ ನಗದು ವಶಕ್ಕೆ

ಮಂಗಳೂರು(ಮಹಾರಾಷ್ಟ್ರ): ನಾಸಿಕ್‌ನ ಸುರಾನಾ ಜ್ಯುವೆಲ್ಲರಿ ಶಾಪ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಾಂತರ ಮೊತ್ತದ ನೋಟುಗಳ ಕಂತೆಯನ್ನು ವಶಕ್ಕೆ ಪಡೆದಿದ್ದಾರೆ.

ಸುರಾನಾ ಜ್ಯುವೆಲ್ಲರಿ ಮಾಲೀಕರು ನಡೆಸಿದ ಅಘೋಷಿತ ಹಣ ವರ್ಗಾವಣೆ ಹಾಗೂ ವ್ಯವಹಾರಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ವರದಿ ಆಗಿದೆ. ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ವೇಳೆ ಸುಮಾರು 26 ಕೋಟಿ ನಗದು ಮತ್ತು 90 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಒಟ್ಟು 116 ಕೋಟಿ ನಗದನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಂತಾಗಿದೆ.

https://x.com/ANI/status/1794595940017574127

ಕಂತೆ ಕಂತೆ ನೋಟುಗಳ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರ ತರಹದ ಕಾಮೆಂಟ್ ಮಾಡುತ್ತಿದ್ದಾರೆ. ಬಹುಶಃ ಇವರು ಇಲೆಕ್ಷನ್ ಬಾಂಡ್‌ಗೆ ದುಡ್ಡು ನೀಡಿಲ್ಲ ಎಂದು ಕಾಣಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸಣ್ಣದೊಂದು ಜ್ಯುವೆಲ್ಲರಿ ಶಾಪ್‌ನಲ್ಲಿ ಇಷ್ಟೊಂದು ಹಣ ಹೇಗೆ ಎಂದು ಕೇಳುತ್ತಿದ್ದಾರೆ.ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇನ್ನಷ್ಟೇ ಮಾಹಿತಿ ನೀಡಬೇಕಿದ್ದು, ಅವರ ಹೇಳಿಕೆ ನಂತರವಷ್ಟೇ ಹೆಚ್ಚಿನ ಮಾಹಿತಿ ಸಿಗಲಿದೆ.

LEAVE A REPLY

Please enter your comment!
Please enter your name here