ವಿಮಾನದೊಳಗೆ ಬೆತ್ತಲೆ ಓಡಾಡಿದ-ವಿಮಾನ ಹಿಂದಿರುಗಿಸುವಂತೆ ಒತ್ತಾಯ ಮಾಡಿದ-ಕೊನೆಗೆ ಪ್ರಯಾಣಿಕ ಪೊಲೀಸರ ಅಥಿತಿಯಾದ

ವಿಮಾನ ಆಸ್ಟ್ರೇಲಿಯಾದಿಂದ ಮೆಲ್ಬೋರ್ನ್‌ಗೆ ತೆರಳುತ್ತಿದ್ದ ವಿಮಾನ ಪ್ರಯಾಣಿಕನ ಅಸಭ್ಯ ವರ್ತನೆಯಿಂದ ಟೇಕಾಫ್ ಆದ ಕೆಲವೇ ಗಂಟೆಗಳಲ್ಲಿ ಹಿಂದಿರುಗಿದ ಘಟನೆ ನಡೆದಿದೆ. ಫ್ಲೈಟ್ VA696 ಪರ್ತ್ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಸುಮಾರು 7.20 ಗಂಟೆಗೆ ಹೊರಟಿತ್ತು. ಪ್ರಯಾಣಿಕರೊಬ್ಬರು ವಿಮಾನದಲ್ಲಿ ಬೆತ್ತಲೆಯಾಗಿ ಓಡಾಡಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬೀಳಿಸಿದ್ದು, ವಿಮಾನವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ವಿಮಾನ ನಿಲ್ದಾಣದಲ್ಲಿದ್ದ ಆಸ್ಟ್ರೇಲಿಯಾ ಫೆಡರಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿಸಿರುವ ಆರೋಪಿಯನ್ನ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 14 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಸುರಕ್ಷಿತವಾಗಿ ಪರ್ತ್‌ನಲ್ಲಿ ಇಳಿಸಲಾಗಿದ್ದು, ಘಟನೆಯಲ್ಲಿ ಸಹ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ವ್ಯಕ್ತಿ ಯಾವಾಗ ತನ್ನ ಬಟ್ಟೆಗಳನ್ನು ಬಿಚ್ಚಿಟ್ಟಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ.

LEAVE A REPLY

Please enter your comment!
Please enter your name here