ಮೂಗಿನ ಮೂಲಕ ಟೈಪಿಂಗ್ – ತನ್ನದೇ ದಾಖಲೆ ಮುರಿದು ಗಿನ್ನಿಸ್ ರೆಕಾರ್ಡ್

ಮಂಗಳೂರು(ಹೊಸದಿಲ್ಲಿ): ಅತಿವೇಗವಾಗಿ ಮೂಗಿನಿಂದ ಇಂಗ್ಲಿಷ್ ಅಕ್ಷರಗಳನ್ನು ಟೈಪ್ ಮಾಡುವ ವಿಶಿಷ್ಟ ದಾಖಲೆಯನ್ನು 44 ವರ್ಷ ವಯಸ್ಸಿನ ವಿನೋದ್ ಕುಮಾರ್ ಚೌಧರಿ ನಿರ್ಮಿಸಿದ್ದಾರೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ಈ ಹಿಂದೆ ಮೂರು ಬಾರಿ ದಾಖಲೆ ಮಾಡಿದ್ದ ಚೌಧರಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2023ರಲ್ಲಿ ಮೊದಲ ಬಾರಿ 27.80 ಸೆಕೆಂಡ್, ಅದೇ ವರ್ಷ ಎರಡನೇ ಪ್ರಯತ್ನದಲ್ಲಿ 26.73 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದ ಚೌಧರಿ ಈ ಬಾರಿ ಕೇವಲ 25.66 ಸೆಕೆಂಡ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಚೌಧರಿ ತಮ್ಮದೇ ದಾಖಲೆ ಮುರಿಯುವ ದೃಶ್ಯದ ವಿಡಿಯೊವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್, ಎಕ್ಸ್ ನಲ್ಲಿ ಹಂಚಿಕೊಂಡಿದೆ. ಮೂಗಿನಿಂದ ಮಧ್ಯೆ ಸ್ಥಳಾವಕಾಶ ನೀಡಿ ನೀವು ಎಷ್ಟು ಕ್ಷಿಪ್ರವಾಗಿ ಅಕ್ಷರಮಾಲೆ ಟೈಪ್ ಮಾಡಬಹುದು ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಬಿಡುಗಡೆ ಮಾಡಿದೆ. ಚೌಧರಿ ರೋಮನ್ ಅಕ್ಷರಗಳನ್ನು ಕ್ವೆರ್ಟಿ ಕೀಬೋರ್ಡ್ ಮೂಲಕ ಪ್ರತಿ ಅಕ್ಷರದ ನಡುವೆ ಜಾಗ ಬಿಟ್ಟು ಟೈಪ್ ಮಾಡಿದ್ದಾರೆ.

 

ಟೈಪಿಂಗ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಚೌಧರಿ, ಒಂದೇ ಕೈಯಲ್ಲಿ ಕೇವಲ 5.36 ಸೆಕೆಂಡ್ ಗಳಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಹಿಮ್ಮುಖವಾಗಿ ಟೈಪ್ ಮಾಡಿದ ದಾಖಲೆ ಸೇರಿದಂತೆ ಬೆನ್ನ ಹಿಂದೆ ಕೈ ತಂದು ಕೇವಲ 6.78 ಸೆಕೆಂಡ್ ಗಳಲ್ಲಿ ಇಂಗ್ಲಿಷ್ ಅಕ್ಷರಮಾಲೆ ಟೈಪ್ ಮಾಡಿ ದಾಖಲೆ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here