ರಸ್ತೆಯಲ್ಲಿ ನಮಾಜ್‌ ಪ್ರಕರಣ – ವಿಶ್ವ ಹಿಂದೂ ಪರಿಷತ್ ನಿಂದ ರಾಜ್ಯಪಾಲರಿಗೆ ಮನವಿ

ಮಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜು ಮಾಡಿದ ಪ್ರಕರಣಕ್ಕೆ ಹಾಕಿದ ” B ” ರಿಪೋರ್ಟ್ ರದ್ದು ಪಡಿಸಲು, ಹಿಂದೂ ನಾಯಕ ಶರಣ್ ಪಂಪುವೆಲ್ ವಿರುದ್ದ ದಾಖಲಿಸಿದ ಪ್ರಕರಣ ವಾಪಾಸ್ ಪಡೆಯುವಂತೆ ಮತ್ತು ಈ ಪ್ರಕರಣದಲ್ಲಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ಪೊಲೀಸ್ ಅಧಿಕಾರಿಯ ಕಡ್ಡಾಯ ರಜೆ ಆದೇಶವನ್ನು ರದ್ದುಪಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರಿಗೆ  ಮಂಗಳೂರು ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಚ್ ಕೆ ಪುರುಷೋತ್ತಮ, ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಹಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here