ಮತಸಮರ -2024 – ದ.ಕ ಲೋಕಸಭಾ ಕ್ಷೇತ್ರ – ಬಿಜೆಪಿ ಅಭ್ಯರ್ಥಿಗೆ 1,14, 085 ಮತಗಳ ಮುನ್ನಡೆ

ಮಂಗಳೂರು/ಪುತ್ತೂರು:ದ.ಕ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮಂಗಳೂರಿನ ಎನ್ ಐಟಿಕೆ ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಿದೆ. ಇದುವರೆಗೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 4,79,806 ಸಾವಿರ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ ನ ಪದ್ಮರಾಜ್‌ ಪೂಜಾರಿ 3,65,721 ಮತಗಳನ್ನು ಪಡೆದುಕೊಂಡಿದ್ದಾರೆ. ಇದುವರೆಗಿನ ನೋಟಾ ಮತಗಳು 14733.

 

  • ಷೇರು ಮಾರುಕಟ್ಟೆ ಕುಸಿತದ ಭೀತಿಯಲ್ಲಿ
  • ರಾಜ್ಯದಲ್ಲಿ 19 ಕ್ಷೇತ್ರಗಳಲ್ಲಿ ಬಿಜೆಪಿ- 9 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ
  • ಒಟ್ಟು 297 ಕ್ಷೇತ್ರಗಳಲ್ಲಿ ಎನ್‌ ಡಿ ಎ ಒಕ್ಕೂಟ ಮುನ್ನಡೆ
  • 227 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ
  • ಇತರರು 19 ಕ್ಷೇತ್ರದಲ್ಲಿ ಮುನ್ನಡೆ
  • ಅಮಿತ್‌ ಶಾ 5 ಲಕ್ಷ ಮತಗಳ ಅಂತರದಲ್ಲಿ ಗೆಲುವು
  • ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಗೆಲುವು
  • ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಗೆಲುವು
  • ಟಿಡಿಪಿ ಮತ್ತು ಜೆಡಿಯು ಜೊತೆ ಕಾಂಗ್ರೆಸ್‌ ಮಾತುಕತೆ
  • ದ.ಕ ದಲ್ಲಿ ಇದುವರೆಗೆ 8,68,198 ಮತಗಳ ಎಣಿಕೆ ಪೂರ್ಣ
  • ಬಿಜೆಪಿಯ ವಿಶ್ವೇಶ್ವರ ಹೆಗ್ಡೆ ಕಾಗೇ‌ರಿ,ಜಗದೀಶ್‌ ಶೆಟ್ಟರ್‌ ಗೆ ಜಯ
  • ಕಾಂಗ್ರೆಸ್‌ ನ ಸುನಿಲ್‌ ಬೋಸ್‌ ಗೆ ಜಯ
  • ಹಾಸನದಲ್ಲಿ ಕಾಂಗ್ರೆಸ್‌ ನ ಶ್ರೇಯಸ್‌ ಪಟೇಲ್‌ ಗೆ ಜಯ
  • ಬಳ್ಳಾರಿಯಲ್ಲಿ ಕಾಂಗ್ರೆಸ್‌ ನ ತುಕಾರಾಮ್‌ ಗೆ ಗೆಲುವು
  • ಉಡುಪಿಯಲ್ಲಿ ಕೋಟ ಶ್ರೀನಿವಾಸ್‌ ಪೂಜಾರಿ ಗೆಲುವು
  • ಮಂಡ್ಯದಲ್ಲಿ ಕುಮಾರ ಸ್ವಾಮಿ ಗೆಲುವು
  • ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆ ಗೆಲುವು
  • ತುಮಕೂರು ಬಿಜೆಪಿ ಅಭ್ಯರ್ಥಿ ಸೋಮಣ್ಣ ಗೆ ಗೆಲುವು
  • ಬೆಂಗಳೂರು ಗ್ರಾಮಾಂತರ ಬಿಜೆಪಿಯ ಡಾ.ಮಂಜುನಾಥ್‌ ಗೆ ಗೆಲುವು
  • ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಯ ಡಾ. ಸುಧಾಕರ್‌ ಗೆ ಗೆಲುವು
  • ಧಾರವಾಡ ಬಿಜೆಪಿಯ ಪ್ರಹ್ಲಾದ್‌ ಜೋಶಿಗೆ ಗೆಲುವು
  • ಬೀದರ್‌ ನಲ್ಲಿ ಕಾಂಗ್ರೆಸ್‌ ನ ಸಾಗರ್‌ ಖಂಡ್ರೆ ಗೆಲುವು
  • ಹಾವೇರಿಯಲ್ಲಿ  ಬಿಜೆಪಿಯ ಬಸವರಾಜ್‌ ಬೊಮ್ಮಾಯಿ ಗೆ ಗೆಲುವು

LEAVE A REPLY

Please enter your comment!
Please enter your name here