ಇದು ಸೊಂಟದ ವಿಷ್ಯ- ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲು

ಮಂಗಳೂರು: ಬಸ್ಸಿನಲ್ಲಿ ಕುಳಿತಿದ್ದ ಯುವತಿಯೊಬ್ಬಳಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಗರದ ಸ್ಟೇಟ್‌ ಬ್ಯಾಂಕ್‌ ನಲ್ಲಿ ನಡೆದಿದ್ದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪೆನಿಯೊಂದಕ್ಕೆ ಸೇರಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 19ರ ಹರೆಯದ ಸಂತ್ರಸ್ತೆ ಯುವತಿ, ಜೂ.7ರ ಶುಕ್ರವಾರ ಬೆಳಿಗ್ಗೆ ತನ್ನ ಕಂಪೆನಿಯ ಉತ್ಪನ್ನಗಳ ಮಾರಾಟದ ಸಲುವಾಗಿ ನಾಗುರಿಯಿಂದ ಬೆಳಗ್ಗೆ 9 ಗಂಟೆ ಬಸ್‌ನಲ್ಲಿ ಸ್ಟೇಟ್‌ಬ್ಯಾಂಕ್‌ಗೆ ಬಂದಿದ್ದಳು. ಸ್ಟೇಟ್‌ಬ್ಯಾಂಕ್‌ನಿಂದ ಬಜಪೆ ಕಡೆಗೆ ಹೋಗಲು ಖಾಸಗಿ ಬಸ್‌ ಏರಿ ಕುಳಿತಿದ್ದಳು. ಈ ವೇಳೆ ಈಕೆಯನ್ನು ಹಿಂಬಾಲಿಸಿಕೊಂಡು ಬಂದ ಸುಮಾರು 28 ವರ್ಷ ವಯಸ್ಸಿನ ಯುವಕ ಆಕೆಯ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದಾನೆ. ಇಷ್ಟಾಗುತ್ತಿದ್ದರೆ ಪರವಾಗಿಲ್ಲ. ಆದರೆ ಈ ಬೀದಿ ಕಾಮಣ್ಣ ಸುಮ್ಮನಿರದೆ ಯುವತಿಯ ಸೊಂಟಕ್ಕೆ ಕೈ ಹಾಕಿದ್ದಾನೆ. ಯುವತಿ ಈ ವಿಷಯವನ್ನು ತನ್ನ ಸಂಬಂಧಿಕರಿಗೆ ತಿಳಿಸಿದ್ದು ಅವರು ಬಸ್ಸನ್ನು ಬಲ್ಲಾಳ್‌ ಭಾಗ್‌ ನಲ್ಲಿ ತಡೆದು ನಿಲ್ಲಿಸಿದ್ದಾರೆ. ಯುವಕನ್ನು ಕೆಳಗಿಳಿಸಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಯುವಕನ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಯುವತಿ  ದೂರು ನೀಡಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here