ಕಿರಿಯ ವಕೀಲರಿಗೆ 15 ರಿಂದ 20 ಸಾವಿರ ಸ್ಟೈಫಂಡ್ – ವಕೀಲರ ಪರಿಷತ್ತು, ಸಂಘಗಳಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಮಂಗಳೂರು/ಮದ್ರಾಸ್: ನೋಂದಾಯಿಸಲ್ಪಟ್ಟ ಕಿರಿಯ ವಕೀಲರಿಗೆ ರೂ. 15000/- ದಿಂದ ರೂ. 20000/- ವರೆಗೆ ಸ್ಟೈಫಂಡ್ (ಶಿಷ್ಯವೇತನ) ನೀಡಬೇಕು ಎಂದು ರಾಜ್ಯ ವಕೀಲರ ಪರಿಷತ್ತು ಮತ್ತು ವಕೀಲರ ಸಂಘಗಳಿಗೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ. ಮದ್ರಾಸ್ ಹೈಕೋರ್ಟ್‌ನ ನ್ಯಾ. ಎಸ್.ಎಂ. ಸುಬ್ರಹ್ಮಣ್ಯಮ್ ಹಾಗೂ ಸಿ.ಕುಮಾರಪ್ಪನ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಚೆನ್ನೈ, ಮಧುರೈ ಹಾಗೂ ಕೊಯಮತ್ತೂರಿನಲ್ಲಿ ವಕೀಲ ವೃತ್ತಿ ಕೈಗೊಳ್ಳುವ ಕಿರಿಯ ವಕೀಲರಿಗೆ ರೂ. 20000/- ಹಾಗೂ ಉಳಿದ ನಗರಗಳಲ್ಲಿ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುವ ಕಿರಿಯ ವಕೀಲರಿಗೆ ರೂ. 15000/- ಶಿಷ್ಯವೇತನ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ. ರಾಜ್ಯದ ಮೂಲ ಜೀವನ ವೆಚ್ಚ ಮತ್ತು ಪ್ರಚಲಿತ ವೆಚ್ಚ ಸೂಚ್ಯಂಕ ಪರಿಗಣಿಸಿ ಕನಿಷ್ಟ ಶಿಷ್ಯವೇತನವನ್ನು ಲೆಕ್ಕ ಮಾಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ತಮಿಳುನಾಡು ವಕೀಲರ ಪರಿಷತ್ತು ಪರ ಹಾಜರಾದ ವಕೀಲರು, ಕಿರಿಯರಿಗೆ ಉತ್ತಮ ವೇತನ ನೀಡುವುದಕ್ಕೆ ಪರಷತ್ತಿನ ಒಪ್ಪಿಗೆ ನೀಡಿದೆ ಎಂದು ಹೇಳಿದ್ದು, ಅಂತಹ ಸುತ್ತೋಲೆಯನ್ನು ಪರಿಗಣಿಸಲು ಎರಡು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here