



ಮಂಗಳೂರು/ಮಂಡ್ಯ: ಎಮ್ಮೆಯೊಂದು ಎಂಟು ಕಾಲು ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿರುವ ವಿಸ್ಮಯಕಾರಿ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಚಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ದುರದೃಷ್ಟವಶಾತ್ ಕರು ಸಾವನ್ನಪ್ಪಿದೆ.



ಗ್ರಾಮದ ಶಿವಲಿಂಗಯ್ಯ ಎಂಬುವವರಿಗೆ ಸೇರಿದ ಎಮ್ಮೆ ಗುರುವಾರ(ಜೂ.13) ಕರು ಹಾಕಿದ್ದು, ಕರು ಎಂಟು ಕಾಲು, ಎರಡು ತಲೆ, ಎರಡು ಬಾಲವನ್ನು ಹೊಂದಿತ್ತು. ಆದರೆ, ಕರು ಎಮ್ಮೆಯ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಎಮ್ಮೆ ಕರು ಹಾಕಲು ಹರಸಾಹಸ ಪಟ್ಟಿತ್ತು. ಬಳಿಕ, ಸ್ಥಳಕ್ಕೆ ಪಶು ವೈದ್ಯರನ್ನು ಬಂದು, ಎಮ್ಮೆಗೆ ಹೆರಿಗೆ ಮಾಡಿಸಲು ಯತ್ನಿಸಿದರು. ಅದಾಗ್ಯೂ, ಕರು ಹೊರಬಂದಿರಲಿಲ್ಲ. ಬಳಿಕ, ಮತ್ತೋರ್ವ ಪಶು ವೈದ್ಯರನ್ನು ಕರೆಸಿ, ಶಸ್ತ್ರಚಿಕಿತ್ಸೆಯ ಮೂಲಕ ಕರುವನ್ನು ಹೊರ ತೆಗೆಯಲಾಗಿದೆ. ಆದರೆ, ಆ ವೇಳೆಗೆ ಕರು ಸಾವನ್ನಪ್ಪಿತ್ತು ಎಂದು ಶಿವಲಿಂಗಯ್ಯ ತಿಳಿಸಿದ್ದಾರೆ.















