ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ 

ಮಂಗಳೂರು/ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರಿಗೆ ಹೊಸ ಸ್ಮಾರ್ಟ್ ಫೋನ್ ಗಳನ್ನು ನೀಡಲು ಮುಂದಾಗಿದೆ. ಅಂಗನವಾಡಿ ಕೆಲಸ ಕಾರ್ಯಗಳನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.

ಸ್ಯಾಮ್ಸಂಗ್ ಮೊಬೈಲ್ ಗಳನ್ನು ರಾಜ್ಯಾದ್ಯಂತ 65,000 ಕಾರ್ಯಕರ್ತೆಯರು ಮತ್ತು 3 ಸಾವಿರಕ್ಕೂ ಅಧಿಕ ಮೇಲ್ವಿಚಾರಕರಿಗೆ  ನೀಡಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಟೆಂಡರ್ ಕರೆದು ಸ್ಮಾರ್ಟ್‌ ಫೋನ್ ಗಳನ್ನು ಖರೀದಿಸಲಾಗಿದ್ದು, ಮೊಬೈಲ್ ಗಳನ್ನು ಶೀಘ್ರದಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಈ ಹಿಂದೆ ನೀಡಿದ ಮೊಬೈಲ್ ಗಳು ಕಳಪೆ ಗುಣಮಟ್ಟದ್ದಾಗಿದ್ದರಿಂದ ಮಾಹಿತಿ ದಾಖಲಿಸಲಾಗುತ್ತಿಲ್ಲ ಎಂದು ದೂರಿದ್ದರು. ಆ ಕಾರಣದಿಂದಾಗಿ ಸ್ಯಾಮ್ಸಂಗ್ ಕಂಪನಿಯ ಗುಣಮಟ್ಟದ ಮೊಬೈಲ್ ಗಳನ್ನು ನೀಡಲಾಗುತ್ತಿದೆ.  

LEAVE A REPLY

Please enter your comment!
Please enter your name here