ಮಂಗಳೂರು/ಔರಂಗಾಬಾದ್: ಮಹಾರಾಷ್ಟ್ರದಲ್ಲಿ ಕಾರನ್ನು ರಿವರ್ಸ್ ಮಾಡಿ 300 ಅಡಿಗಳಷ್ಟು ಕಮರಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಕೆ ಡ್ರೈವಿಂಗ್ ಮಾಡುತ್ತಿರುವುದನ್ನು ಸೆರೆ ಹಿಡಿದಿದ್ದ ಸ್ನೇಹಿತನ ಮೊಬೈಲ್ ನಲ್ಲಿ ಘಟನೆಯ ಈ ದೃಶ್ಯ ಸೆರೆಯಾಗಿದೆ.
ಶ್ವೇತಾ ದೀಪಕ್ ಸುರ್ವಾಸೆ(23) ಮತ್ತು ಸೂರಜ್ ಸಂಜೌ ಮುಲೆ(25) ಇಬ್ಬರೂ ಸ್ನೇಹಿತರಾಗಿದ್ದು ಸೋಮವಾರ(ಜೂ.17) ಮಧ್ಯಾಹ್ನ ಔರಂಗಾಬಾದ್ನಿಂದ ಸುಲಿಭಂಜನ್ ಹಿಲ್ಸ್ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ತಲುಪಿದ ಮೇಲೆ ರೀಲ್ಸ್ ಮಾಡುವ ಸಲುವಾಗಿ ಶ್ವೇತಾ ಕಾರನ್ನು ರಿವರ್ಸ್ ತೆಗೆಯುವ ವೇಳೆ ಈ ದುರ್ಘಟನೆ ನಡೆದಿದ್ದು ಕಾರು 300 ಅಡಿ ಕೆಳಗೆ ಕಮರಿಗೆ ಬಿದ್ದಿದ್ದು ಶ್ವೇತ ಸಾವನ್ನಪ್ಪಿದ್ದಾಳೆ. ಸ್ನೇಹಿತ ಸೂರಜ್ ಸೆರೆ ಹಿಡಿದ ಶ್ವೇತಾ ದೀಪಕ್ ಸುರ್ವಾಸೆ ಚಾಲಕನ ಸೀಟಿನಲ್ಲಿ ಕೂತು ರಿವರ್ಸ್ ಮಾಡುವ ವಿಡಿಯೋ ವೈರಲಾಗಿದೆ. ನಿಧಾನವಾಗಿ ಹಿಂದಕ್ಕೆ ಚಲಿಸುತ್ತಿದ್ದ ಕಾರು ತಪ್ಪಾಗಿ ಆಕ್ಸಿಲೇಟರ್ ಒತ್ತಿದ್ದರಿಂದ ಒಮ್ಮೆಲೆ ವೇಗ ಪಡೆದುಕೊಂಡಿದೆ. ಈ ವೇಳೆ ಸ್ನೇಹಿತ ಸೂರಜ್ ಕ್ಲಚ್ ಕ್ಲಚ್ ಎನ್ನುವ ಆಡಿಯೋ ವಿಡಿಯೋದಲ್ಲಿದೆ. ಕಾರು 300 ಅಡಿ ಎತ್ತರದಿಂದ ಕೆಳಗೆ ಉರುಳಿ ಕಮರಿಗೆ ಬಿದ್ದಿದ್ದು ವಾಹನದ ನಜ್ಜುಗುಜ್ಜಾದ ಅವಶೇಷಗಳು ವಿಡಿಯೋದಲ್ಲಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
On Camera, Woman Reverses Car Off #Maharashtra Cliff, Falls 300 Feet, Dies
Read Here: https://t.co/KRKKoWvbkh pic.twitter.com/lk2L3BtZHW
— NDTV (@ndtv) June 18, 2024