ಮಾವುತನನ್ನು ಬೀಳಿಸಿ, ಎರಡು ಕಾಲಿನಿಂದ ಒದ್ದು ಅಪ್ಪಚ್ಚಿಗೊಳಿಸಿದ ಆನೆ – ವಿಡಿಯೋ ವೈರಲ್

ಮಂಗಳೂರು/ತಿರುವನಂತಪುರ: ಸಾಕಾನೆಯೊಂದು ಮಾವುತನನ್ನು ತುಳಿದು ಕೊಂದ ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 20 ರಂದು ಈ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.

ಮಾವುತನ್ನು ಸೊಂಡಿಲಿನಿಂದ ಬೀಳಿಸಿ, ಎರಡು ಕಾಲುಗಳನ್ನು ಆತನ ಮೇಲಿಟ್ಟು ನಿರ್ದಯದವಾಗಿ ಮಾವುತನನ್ನು ಕೊಂದಿರುವ ದೃಶ್ಯ ಎಂತವರನ್ನು ಬೆಚ್ಚಿಬೀಳಿಸುವಂತಿದೆ. ಮೃತ ಮಾವುತನನ್ನು 62 ವರ್ಷದ ಬಾಲಕೃಷ್ಣ ಎಂದು ಗುರುತಿಸಲಾಗಿದೆ.

ವರದಿ ಪ್ರಕಾರ, ಇಡುಕ್ಕಿಯ ಸಫಾರಿ ಕೇಂದ್ರದಲ್ಲಿ ಆನೆಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮಾವುತನ ಸಾವಿನ ಬಳಿಕ ಸಫಾರಿ ಕೇಂದ್ರಕ್ಕೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.  

ಮೃತ ಮಾವುತ ಬಾಲಕೃಷ್ಣ ನೀಲೇಶ್ವರಂ ನಿವಾಸಿಯಾಗಿದ್ದು, ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಆನೆಯನ್ನು ಸಿದ್ಧಗೊಳಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here