ಕರ್ತವ್ಯಕ್ಕೆ ರಜೆ ಹಾಕಿ ಮಹಿಳಾ ಕಾನ್ಸ್‌ಟೆಬಲ್‌ ಜೊತೆ ಲಾಡ್ಜ್‌ನಲ್ಲಿ ಪತ್ತೆಯಾದ ಹಿರಿಯ ಪೊಲೀಸ್ ಅಧಿಕಾರಿಗೆ ಹಿಂಬಡ್ತಿ ಸಜೆ 

ಮಂಗಳೂರು/ಉತ್ತರ ಪ್ರದೇಶ: ಕೌಟುಂಬಿಕ ವಿಚಾರಕ್ಕೆ ರಜೆ ಬೇಕು ಎಂದು ಕೇಳಿ ಕರ್ತವ್ಯಕ್ಕೆ ರಜೆ ಹಾಕಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಕಾನ್ಸ್‌ಟೆಬಲ್‌ ಜೊತೆ ಲಾಡ್ಜ್‌ನಲ್ಲಿ ಪತ್ತೆಯಾಗುವ ಮೂಲಕ ಇಲಾಖೆಯೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.

ಉತ್ತರ ಪ್ರದೇಶದ ಉನ್ನಾವೋ ಪ್ರದೇಶದ ಡಿಎಸ್‌ಪಿ ಹುದ್ದೆಯ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಕನೌಜಿಯಾ ಅವರು ಪ್ರಕರಣದ ರೂವಾರಿ. ಕೌಟುಂಬಿಕ ವಿಚಾರಕ್ಕೆ ರಜೆ ಬೇಕು ಎಂದು ಹೇಳಿ ಕಾನ್ಪುರದ ಲಾಡ್ಜ್‌ವೊಂದರಲ್ಲಿ ಮಹಿಳಾ ಪೊಲೀಸ್‌ ಪೇದೆಯೊಂದಿಗೆ ಸರಸಕ್ಕೆ ಇಳಿದಿದ್ದರು. ಮನೆಗೆ ಬಾರದೆ ಇದ್ದ ಪತಿಯ ಬಗ್ಗೆ ವಿಚಾರಿಸಲು ಪತ್ನಿ ಕಾಲ್‌ ಮಾಡಿದಾಗ ಪತಿಯ ಎರಡೂ ಮೊಬೈಲ್‌ ಸ್ವಿಚ್ ಆಫ್‌ ಆಗಿದ್ದು ಗಾಬರಿಗೊಂಡಿದ್ದಾರೆ. ಬೇರೆ ದಾರಿ ಕಾಣದೆ ಆತಂಕಗೊಂಡು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಫೋನ್‌ ನಂಬರ್‌ ಆಧರಿಸಿ ಟವರ್‌ ಲೋಕೇಶನ್‌ ಪತ್ತೆ ಹಚ್ಚಿದ ಪೊಲೀಸರು ಲಾಡ್ಜ್‌ಗೆ ತೆರಳಿ ನೋಡಿದಾಗ ಸಾಹೇಬರು ಮಹಿಳಾ ಪೊಲೀಸ್‌ ಪೇದೆಯೊಂದಿಗೆ ಮಂಚದಲ್ಲಿ ಪವಡಿಸಿರುವುದು ಕಂಡು ಬಂದಿದೆ. ಲಾಡ್ಜ್‌ನ ಸಿಸಿಟಿವಿ ಕ್ಯಾಮರಾದಲ್ಲೂ ಇವರಿಬ್ಬರ ಹರ್ಕತ್ ಸೆರೆಯಾಗಿದೆ. ಪೊಲೀಸ್‌ ಮೇಲಾಧಿಕಾರಿಗಳು ಶಂಕರ್ ಕನೌಜಿಯಾ ಅವರನ್ನು ಅಮಾನತು ಮಾಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆದು ಹಿರಿಯ ಪೊಲೀಸ್ ಅಧಿಕಾರಿಗೆ ಹಿಂಬಡ್ತಿ ಶಿಕ್ಷೆ ನೀಡುವಂತೆ ಶಿಫಾರಸ್ಸು ಮಾಡಿದೆ. ಅದರಂತೆ ಶಂಕರ್ ಕನೌಜಿಯಾ ಅವರಿಗೆ ಪೊಲೀಸ್ ಪೇದೆಯ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.

2021ರಲ್ಲಿ ಉನ್ನಾವೋದ ಬಿಘಾಪುರ್ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಶಂಕರ್ ಕನೌಜಿಯಾ ಅವರು ಡಿಎಸ್‌ಪಿ ಹುದ್ದೆಗೆ ಪದೋನ್ನತಿ ಹೊಂದಿದ್ದರು. ಆ ಬಳಿಕ, ಅವರು ಮಹಿಳಾ ಪೇದೆಯೊಬ್ಬರ ಜೊತೆಗೆ ಸಲುಗೆಯಿಂದ ಇರಲು ಶುರು ಮಾಡಿದ್ದರು ಎನ್ನಲಾಗಿದೆ. 

LEAVE A REPLY

Please enter your comment!
Please enter your name here