ಬೀದಿ ನಾಯಿಗಳ ದಾಳಿಯಿಂದ ಪಾರಾದ ಮಹಿಳೆ – ಜನ ಜಾಗೃತಿಗಾಗಿ ಪತಿಯಿಂದ ವಿಡಿಯೋ ಬಿಡುಗಡೆ

ಮಂಗಳೂರು/ಮನಿಕೊಂಡ: ಬೆಳಗಿನ ವಾಯುವಿಹಾರಕ್ಕೆಂದು ಹೊರಟಿದ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ನಡೆಸಲು ಯತ್ನಿಸಿರುವ ಘಟನೆ ಮನಿಕೊಂಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಬೀದಿ ನಾಯಿಗಳ ಹಾವಳಿಯ ಬಗ್ಗೆ ಸಾರ್ವತ್ರಿಕ ಕಳವಳ ವ್ಯಕ್ತವಾಗಿದೆ.

ತನ್ನನ್ನು ಸುತ್ತುವರಿದಿದ್ದ ಬೀದಿ ನಾಯಿಗಳ ಗುಂಪಿನಿಂದ ಮಹಿಳೆ ಕೊಂಚ ಭಯಭೀತವಾಗಿದ್ದರೂ, ಧೈರ್ಯ ಕಳೆದುಕೊಳ್ಳದೆ ತಾನು ತೊಟ್ಟಿದ್ದ ಪಾದರಕ್ಷೆಯನ್ನು ಬಳಸಿ ಬೀದಿ ನಾಯಿಗಳ ಗುಂಪಿನಿಂದ ಪಾರಾಗಲು ಯತ್ನಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಮೊದಮೊದಲು ಬೀದಿ ನಾಯಿಗಳ ಗುಂಪಿನ ದಾಳಿಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ಆ ಮಹಿಳೆ ಕೊನೆಗೂ ಅವುಗಳಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ವೀಡಿಯೋವನ್ನು ಜೂ.22 ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಮಹಿಳೆಯ ಪತಿಯು, ತನ್ನ ಪತ್ನಿ ನಾಯಿಗಳ ದಾಳಿಯಿಂದ ಪಾರಾಗಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ನಾಯಿಗಳಿಗೆ ಆಹಾರ ಒದಗಿಸುವ ಮೂಲಕ ಅವು ಸ್ಥಳೀಯ ನಿವಾಸಿಗಳ ಮೇಲೆ ದಾಳಿ ನಡೆಸದಂತೆ ನೋಡಿಕೊಳ್ಳಿ ಎಂದು ವಸತಿ ಪ್ರದೇಶದಲ್ಲಿರುವ ಜನರಿಗೆ ಮನವಿ ಮಾಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here