ಮಂಗಳೂರು (ಬರೇಲಿ): ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂಬ ಕಾರಣಕ್ಕೆ ಹೊಡೆದಾಟ ನಡೆದು ಮದುವೆ ಮನೆ ರಣರಂಗವಾದ ಘಟನೆ ಉತ್ತರಪ್ರದೇಶದ ಬರೇಲಿಯ ನವಾಬ್ಗಂಜ್ ಬಳಿ ನಡೆದಿದೆ.
ಆದರೆ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿಲ್ಲ ಎಂದು ನವಾಬ್ಗಂಜ್ ಪೊಲೀಸರು ಹೇಳಿದ್ದಾರೆ. ಘಟನೆಯ ವೀಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಡಿನ ಕಡೆಯವರು ಚಿಕನ್ ಬಿರಿಯಾನಿಯಲ್ಲಿ ಲೆಗ್ ಫೀಸ್ ಇಲ್ಲ ಎಂದು ಆಕ್ಷೇಪವೆತ್ತಿದ್ದು, ಇದರಿಂದ ಸಿಟ್ಟಿಗೆದ್ದ ಹುಡುಗಿ ಕಡೆಯವರು, ವರನ ಕುಟುಂಬದವರು ಹಾಗೂ ಸಂಬಂಧಿಗಳನ್ನು ಹೊಡೆದಿದ್ದಾರೆ. ಘಟನೆಯಿಂದ ಸಿಟ್ಟಿಗೆದ್ದ ವರನ ಕಡೆಯವರು ಮದುವೆ ಪ್ರಕ್ರಿಯೆ ಮುಂದುವರಿಸುವುದಕ್ಕೆ ನಿರಾಕರಿಸಿದ್ದಾರೆ. ಆದರೆ ನಂತರದಲ್ಲಿ ಅಲ್ಲಿದ್ದ ಸಂಬಂಧಿಗಳು ಹಿರಿಯರು ಸೇರಿ ಮನವೊಲಿಸಿದ ನಂತರ ಎರಡೂ ಕುಟುಂಬಗಳು ಮನವೊಲಿಕೆ ಮಾಡಿ ಮದುವೆ ಶಾಸ್ತ್ರ ಮುಂದುವರಿಸಿದ್ದಾರೆ. ಯಾರೋ ಈ ಘಟನೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Bareilly, UP.
Chicken leg pieces in the biryani got over at the wedding dawaat.
So, the groom and his guests were served kicks, punches, and flying chairs.pic.twitter.com/rhmxIAw35m— Abhijit Majumder (@abhijitmajumder) June 24, 2024