ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ.. ಬ್ಲಾಸ್ಟ್ ಆದ​ ರಭಸಕ್ಕೆ ಕುಸಿದು ಬಿದ್ದ ಬಿಲ್ಡಿಂಗ್.. ನಾಲ್ವರು ಸಾವು

ಮಂಗಳೂರು/ಚೆನ್ನೈ: ಪಟಾಕಿ ತಯಾರಿಕಾ ಫ್ಯಾಕ್ಟರಿಯಲ್ಲಿ ಭಯಾನಕ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುದುನಗರದ ಸತ್ತೂರಿನಲ್ಲಿ ನಡೆದಿದೆ.

ಸತ್ತೂರು ನಗರದಲ್ಲಿರುವ ಖಾಸಗಿ ಒಡೆತನದ ಪಟಾಕಿ ತಯಾರಿಕಾ ಘಟಕದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಸಾಯನಿಕಗಳನ್ನು ಬೆರೆಸಿದ ಪರಿಣಾಮ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ವಿರುದುನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಫೋಟವಾಗುತ್ತಿದ್ದಂತೆ ಬೆಂಕಿಯು ಭಾರೀ ಮಟ್ಟದಲ್ಲಿ ವ್ಯಾಪಿಸಿಕೊಂಡಿತ್ತು. ಬ್ಲಾಸ್ಟ್​ ಆದ ರಭಸಕ್ಕೆ ಕಾರ್ಖಾನೆಯ ಒಂದು ಭಾಗದ ಕಟ್ಟಡವೂ ಸಂಪೂರ್ಣ ಕುಸಿದಿದೆ. ಅಕ್ಕಪಕ್ಕದ ಬಿಲ್ಡಿಂಗ್​ಗಳು ಹಾನಿಗೊಳಗಾಗಿವೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಸಿಎಂ ಎಂ.ಕೆ ಸ್ಟಾಲಿನ್ ಅವರು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಸಂತ್ರಸ್ತ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here