ಮಂಗಳೂರು: ನೀಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ದೇಶಾದ್ಯಂತ ಹೋರಾಟ ಆಗ್ತಾ ಇದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಅಸಹಾಯಕತೆ ತೋರಿಸಿದೆ. ಕೇಂದ್ರ ಸರ್ಕಾರ ಟ್ಯುಟೋರಿಯಲ್,ಟ್ಯೂಷನ್ ಸೆಂಟರ್ ನೊಂದಿಗೆ ಸೇರಿ ವಿದ್ಯಾರ್ಥಿಗಳ ಜೀವನದಲ್ಲಿ ಆಡ್ತಾ ಇದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಲೋಕಸಭೆಯಲ್ಲಿ ಪ್ರತಿಪಕ್ಷಕ್ಕೆ ಮಾತನಾಡಲು ಅವಕಾಶ ಕೊಡ್ತಾ ಇಲ್ಲ, ನಮ್ಮ ವಿದ್ಯಾರ್ಥಿಗಳಿಗೆ ಅನೇಕ ವರ್ಷಗಳಿಂದ ಅನ್ಯಾಯ ಆಗಿದೆ.ಈ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುಲು ಬಿಡ್ತಾ ಇಲ್ಲ, ನೀವೂ ಮಾತನಾಡುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯದಲ್ಲಿ ನೀವು ಆಟ ಆಡ್ತಾ ಇದ್ದೀರಿ ಎಂದು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು ಬೇರೆ ಬೇರೆ ರಾಜ್ಯಗಳು ನೀಟ್ ಪರೀಕ್ಷೆಯಿಂದ ಹೊರ ಬರುವುದಾಗಿ ಹೇಳಿದ್ದಾರೆ. ನಾವು ಕೂಡಾ ಈ ರೀತಿಯ ನಿರ್ಧಾರ ಕೈಗೊಳ್ಳಬೇಕಾದಿತು. ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ನಿರ್ಣಯ ಮಂಡಿಸಲಿದ್ದೇನೆ ಎಂದರು.
ಹೊಣೆಗಾರಿಕೆ ಇಲ್ಲದ ಸರ್ಕಾರ ಇದಾಗಿದ್ದು, ಪ್ರಧಾನಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾಕೆ ಮಾತನಾಡಿಲ್ಲ?, ಇಲ್ಲಿನ ಸಂಸದರು ಈ ಬಗ್ಗೆ ಮಾತನಾಡಿಲ್ಲ ಎಂದು ಟೀಕಿಸಿದ ಅವರು ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆ ಮೇಲೆ ನಂಬಿಕೆ ಕಳೆದುಕೊಂಡಿದ್ದೇವೆ ಎಂದರು.
ರಾಜ್ಯ ಸರ್ಕಾರ ಈ ಪರೀಕ್ಷೆಯಿಂದ ಹೊರ ಬರವಂತೆ ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದ ಶಾಸಕರು, ಪ್ರಕೃತಿ ವಿಕೋಪದಿಂದ ಹಲವು ಸಮಸ್ಯೆ ಆಗಿದೆ.ಪ್ರಾಣಹಾನಿ ಸೇರಿದಂತೆ ಕೃಷಿ, ಇನ್ನಿತರ ಹಾನಿಗಳಾಗಿವೆ. 17 ಕೋಟಿ ರೂಪಾಯಿ ಜಿಲ್ಲಾ ಖಜಾನೆಯಲ್ಲಿದೆ. ತಾಲೂಕು ಕೇಂದ್ರದಲ್ಲೂ 50 ಲಕ್ಷ ರೂಪಾಯಿ ಇದೆ.
ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದ್ದು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳ ಮೂಲಕ ಇದನ್ನು ಬಳಸಲು ಅವಕಾಶ ನೀಡುವಂತೆ ಹೇಳಲಾಗಿದೆ. ಜಿಲ್ಲೆಯಲ್ಲಿ ಮೂರು ಜೀವಗಳನ್ನು ಕಳೆದುಕೊಂಡಿದ್ದು, ಮೆಸ್ಕಾಂ ಸಮಸ್ಯೆ ಇದೆ. ಮೆಸ್ಕಾಂ ಎಂಡಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಪರಿಹಾರಕ್ಕಿಂತಲೂ ಇಲ್ಲಿ ಇಂತಹ ದುರಗಟನೆ ನಡೆಯದಂತೆ ಜಾಗೃತ ವಹಿಸಬೇಕಾಗಿದೆ. ಈ ಹಿಂದೆಯೇ ವಿದ್ಯುತ್ ಬ್ರೇಕರ್ ಹಾಕಬೇಕಿದ್ದ ಮೆಸ್ಕಾಂ ಈಗ ಎಚ್ಚೆತ್ತು ಕೊಂಡಿದ್ದು, ನಗರದಲ್ಲಿ 1600 ಬ್ರೇಕರ್ ಹಾಕಲು ಮುಂದಾಗಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ಪಡೆಯಲು ಸೂಚಿಸಲಾಗಿದೆ ಎಂದು ಐವನ್ ಡಿಸೋಜ ಹೇಳಿದ್ದಾರೆ.