ಮಂಗಳೂರು: ಉಡುಪಿ ಪೇಜಾವರ ಶ್ರೀಗಳು ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡುವುದು, ರಾಜಕೀಯ ಹಸ್ತಕ್ಷೇಪ ಮಾಡುವುದನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್ ಪದ್ಮರಾಜ್ ಖಂಡಿಸಿದ್ದು, ರಾಜಕೀಯ ಬಿಟ್ಟು ಹಿಂದೂ ಸಮಾಜದ ಸಾಮಾಜಿಕ ತಾರತಮ್ಯದ ಬಗ್ಗೆ ಗಮನ ಹರಿಸಿ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯವರು ಮಾತ್ರ ಹಿಂದೂಗಳಲ್ಲ, ಹಿಂದೂ ಸಮಾಜವನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ. ಬಡವರಿಗೆ ಆಸೆ ಆಮಿಷ ಒಡ್ಡಿದ್ದರಿಂದ ಎಕ್ಸ್ ಪೆಕ್ಟೆಡ್ ಸೀಟ್ ಬಂದಿಲ್ಲ, ಎಂದಿರುವ ಅವರು ಆಸೆ ಆಮಿಷ ಒಡ್ಡಿದವರು ಯಾರು? ಜ.21ಕ್ಕೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿದೆ. ಈಗ ನೀರು ಸೋರಿಕೆಯಾಗುತ್ತಿದೆ. ಇದಕ್ಕೆ ನೀವು ಸ್ಪಷ್ಟನೆ ನೀಡುತ್ತೀರಿ. ಫಸ್ಟ್ ಫ್ಲೋರ್ ಕೆಲಸ ಆಗಿಲ್ಲ ಒಂದು ವರ್ಷ ಬೇಕು ಅಂತೀರಿ. ನೀವು ಇದರ ಸದಸ್ಯರೂ ಹೌದು, ಮಂದಿರದ ಕೆಲಸ ಪೂರ್ತಿಯಾಗದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ರಾಜಕೀಯ ಆಮಿಷ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಹೆಮ್ಮೆ ಪಡಬೇಕು. ನೀಟ್ ಹಗರಣ, ಮಣಿಪುರ ಘಟನೆಯನ್ನು ಸಮರ್ಥನೆ ಮಾಡುವುದಾಗಿ ನೇರವಾಗಿ ಹೇಳಿ. ಅದರ ಬಗ್ಗೆ ಮಾತಾಡದೆ ರಾಹುಲ್ ಟೀಕೆ ಎಷ್ಟು ಸರಿ? ನೀಟ್ ಎಕ್ಸಾಂ ಬಗ್ಗೆ ಉತ್ತರ ನೀಡಿದ್ದಿರಾ? ನಿಮಗೆ ಜನರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಇದರಿಂದ ಗೊತ್ತಾಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಬಡವರ ಮಕ್ಕಳಿಗೆ ಅನ್ಯಾಯ ಮಾಡಿದ್ದರ ಬಗ್ಗೆ ಯಾರೂ ಮಾತನಾಡಲ್ಲ, ನಿಮ್ಮ ವಿದ್ಯಾರ್ಥಿ ಘಟಕವೂ ಮಾತಾಡಲ್ಲ. ಬಿಜೆಪಿ ಅಂದರೆ ಹಿಂದೂ ಸಮಾಜ ಅಂತ ಬಿಂಬಿಸುತ್ತಿದ್ದೀರಿ. ನನಗೆ 6.14+ ಲಕ್ಷ ಮತ ಸಿಕ್ಕಿದೆ. 3+ ಲಕ್ಷ ಹಿಂದೂಗಳ ಮತ ಬಿದ್ದಿದೆ. ಹಿಂದೂಗಳನ್ನು ಬಿಜೆಪಿ ಗುತ್ತಿಗೆ ಕೊಟ್ಟವರಂತೆ ಮಾತನಾಡುತ್ತೀರಿ. ಜನರ ಸಮಸ್ಯೆ ಮಾತಾಡುವವರನ್ನೇ ದಮನಿಸೋ ಆಡಳಿತ ನೀತಿಯನ್ನು ಉಗ್ರ ಖಂಡಿಸುತ್ತೇವೆ. ರಾಹುಲ್ ಗಾಂಧಿ ಸಮರ್ಥರಿದ್ದು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಈ ಬಾರಿ ಸರಿಯಾದ ಪಾಠ ನಿಮಗೆ ಕಲಿಸಿದ್ದಾರೆ. ರಾಹುಲ್ ವಿಚಾರ ದೇಶದ ಸಮಸ್ಯೆಗಳು. ಅದಕ್ಕೆ ಉತ್ತರ ಕೊಡೋದು ಬಿಟ್ಟು ಟೀಕೆ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರು ಎಲೆಕ್ಷನ್ ನಂತರ ನಿತ್ಯ ಪ್ರತಿಭಟನೆ ಮಾಡುತ್ತಿದ್ದಾರೆ. 2013ರಲ್ಲಿ ಯುಪಿಎ ಇರುವಾಗ ಕಚ್ಚಾ ತೈಲ ಬೆಲ ಬ್ಯಾರಲ್ ಗೆ 142ರಿಂದ 147 ಡಾಲರ್ ಇದ್ದು ಪೆಟ್ರೋಲ್ ಗೆ 62 ಡಾಲರ್ ಬೆಲೆ ಇತ್ತು. 61 ರಿಂದ 62 ಆಗುವಾಗ ರಸ್ತೆಗಿಳೀತಿದ್ರಿ. ನಂತರ ಮೋದಿ ಬಂದ್ರು, ಕಚ್ವಾ ತೈಲ ಬೆಲೆ ಕುಸಿತ ಆರಂಭವಾಗಿ ಕೊರೋನಾ ಸಮಯದಲ್ಲಿ 23 ಡಾಲರ್ ಗೆ ಬಂದಿತ್ತು. ಇಂದೂ 80-82 ಡಾಲರ್ ಇದೆ. ಆದರೆ ಒಂದು ದಿನವೂ ನಿಮ್ಮ ಆಡಳಿತದಲ್ಲಿ 60 ರೂ.ಗೆ ಪೆಟ್ರೋಲ್ ಕೊಟ್ಟಿದೀರಾ? ಎಂದು ಪ್ರಶ್ನಿಸಿದ ಪದ್ಮರಾಜ್ ಹಾಲು ದರ ಹೆಚ್ಚಳಕ್ಕೆ ಪ್ರೊಟೆಸ್ಟ್ ಮಾಡಿದ್ರಿ. ಕ್ವಾಂಟಿಟಿ ಹೆಚ್ಚಾದದ್ದು ಮರೆಮಾಚಿ ತಪ್ಪು ದಾರಿಗೆ ಎಳೆದಿದ್ದೀರಿ ಎಂದರು.
ಸಿಎಂ ಪತ್ನಿ ನಿವೇಶನ ಬಗ್ಗೆ ಟೀಕೆ ಮಾಡುತ್ತಿದ್ದೀರಿ. 2023ರಲ್ಲಿ ನಿವೇಶನ ಹಂಚಿಕೆ ಆಗಿದೆ. ಸಿಎಂ ಸಂಬಂಧಿ ಹೆಸರಿನಲ್ಲಿದ್ದ ಜಾಗ ಅವರ ಸಹೋದರಿಗೆ ದಾನ ಮಾಡಿದ್ದಾರೆ. ಆ ಜಾಗ ಮುಡಾ ಅಕ್ವೈರ್ ಮಾಡಿದ್ರು. ಪರಿಹಾರ ಕೊಡದೆ ಅವರಿಗೆ ನಿವೇಶನ ಮಂಜೂರು ಮಾಡಿತ್ತು. ಅದು ಹಗರಣ ಎನ್ನೋದು ಎಷ್ಟು ಸರಿ?. ಯಾವುದೇ ಹಗರಣ ಇಲ್ಲ. ಮೂರುವರೆ ಎಕರೆ ಪತ್ನಿ ಜಾಗ ಅಕ್ವೈರ್ ಮಾಡಿಲ್ಲ ಎಂದು ಹೇಳುತ್ತಿದ್ದೀರಿ. ಅದಕ್ಕೆ ಪರಿಹಾರ ಕೊಟ್ಟಿಲ್ಲ ಎನ್ನುವುದೂ ಗೊತ್ತಿದ್ದರೂ ಜನತೆಯ ದಾರಿ ತಪ್ಪಿಸಬೇಡಿ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಜಿ ಹೆಗಡೆ, ಗುರು ಸತ್ಯ ಧರ್ಮದ ದಾರಿ ತಿಳಿದು ಪ್ರವಚನ ಮಾಡಬೇಕು. ಅಂತಹ ಗುರು ಪರಂಪರೆಯನ್ನು ನೀವು ಯಾಕೆ ಬಿಜೆಪಿಮಯ ಮಾಡ್ತೀರಿ. ಮಠ ಮಾಡಿದ್ದು ಮಧ್ವರು. ಬಿಕೆಪಿಯವರಲ್ಲ. ಇಂತಹ ಟೀಕೆ ಗುರು ಪೀಠಕ್ಕೆ ಸರಿಯಾದದ್ದೇ? ರಾಹುಲ್ ಇಡೀ ಹಿಂದೂ ಸಮಾಜ ಬಿಜೆಪಿ ಅಲ್ಲ ಅಂದದ್ದರಲ್ಲಿ ತಪ್ಪೇನಿದೆ? ಹಿಂದೂ ಧರ್ಮದ ಉದಾತ್ತ ಧ್ಯೇಯ ಜನರ ಎದುರು ಇಟ್ಟದ್ದು, ಅದು ನಮಗೆ ಹೆಮ್ಮೆ ವಿಚಾರ. ರಾಹುಲ್ ಬಿಜೆಪಿಯವರು ಹಿಂದೂಗಳು ಅಲ್ಲ ಅಂತ ಹೇಳಿಲ್ಲ. ಸ್ವಾಮೀಜಿ ಯಾವುದೇ ಪಕ್ಷದ ಪರ ಮಾತಾನಾಡುವುದನ್ನು ಒಪ್ಪಲಾಗದು. ಜನರಿಗೆ ಸತ್ಯ ಧರ್ಮದ ಮಾರ್ಗದರ್ಶನ ನೀಡಿ. ಹಿಂದೂ ಸಮಾಜ ಒಗ್ಗೂಡಿಸಲು ನಿಮಗೆ ಯೋಗ್ಯತೆ ಇದೆ. ಮೊದಲು ಅಷ್ಟಮಠದ ಎರಡು ಪಂಚಾಂಗ ತೆಗೆದು ಒಂದೇ ಮಾಡಿ. ಶೀರೂರು ಸ್ವಾಮೀಜಿ ಪಾರ್ಥಿವ ಶರೀರ ರಥಬೀದಿಗೆ ಬರಲು ಬಿಡದೆ ಇದ್ದದ್ದು ಯಾರು? ಎಂದು ಪ್ರಶ್ನಸಿದರು.
ಸಂವಿಧಾನ ಪುಸ್ತಕದಲ್ಲಿ ರಾಮಾಯಣ, ಮಹಾಭಾರತದ ಪುಟ ಎಷ್ಟು? ಪುಟ ಸಂಖ್ಯೆಯ ನಿರ್ಧಾರ ಆಗೋದು ಫಾಂಟ್ ಸೈಜ್ ಮೇಲೆ. ಪುಸ್ತಕ ಗಾತ್ರದ ಮೇಲೆ ಡಿಪೆಂಡ್. ಪ್ರಶ್ನೆ ಕೇಳಲೂ ಗೊತ್ತಿಲ್ಲ. ಸಂವಿಧಾನದಲ್ಲಿ ಎಷ್ಟು ವಿಧಿ ಇದೆ ಕೇಳಬಹುದಿತ್ತು. ಹಿಂದೂ ಸಮಾಜವನ್ನು ಕಟ್ಟಿ, ಬಿಜೆಪಿ ನೇತೃತ್ವದಲ್ಲಿ ಅಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮನೋರಾಜ್, ಪ್ರಕಾಶ್ ಸಾಲ್ಯಾನ್ ಉಪಸ್ಥಿತರಿದ್ದರು.