ಮಂಗಳೂರು/ಬೆಂಗಳೂರು: ಕರ್ತವ್ಯದ ಸಮಯದಲ್ಲಿ ಕಾರ್ಮಿಕ ಗಾಯಗೊಂಡರೆ, ಅದರ ಪರಿಹಾರವನ್ನು ಉದ್ಯೋಗಿಗಳ ಪರಿಹಾರ ಆಯುಕ್ತರ ನ್ಯಾಯಾಲಯದಲ್ಲಿ ಉದ್ಯೋಗಿಗಳ ಪರಿಹಾರ ಕಾಯಿದೆ 1923 ರ ಅಡಿಯಲ್ಲಿ ಪಡೆಯಬೇಕು. ಹೊರತು ಕಾರ್ಮಿಕ ನ್ಯಾಯಾಲಯದ ಮುಂದೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಹೇಳಿದೆ. ಕೆಲಸದ ವೇಳೆ ಉದ್ಯೋಗಿ ಗಾಯಗೊಂಡರೆ, ಆತ ಪರಿಹಾರ ಪಡೆಯಲು ಉದ್ಯೋಗಿಗಳ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕು, ಬದಲಾಗಿ ಕಾರ್ಮಿಕ ನ್ಯಾಯಾಲಯದಲ್ಲಿ ಅಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ನೌಕರರ ಪರಿಹಾರ ಕಾಯಿದೆ- 1923 ರ ಅಡಿಯಲ್ಲಿ ವ್ಯಾಜ್ಯ ಇತ್ಯರ್ಥಗೊಳಿಸಲು ನಿರ್ದಿಷ್ಟ ವೇದಿಕೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ನ್ಯಾಯಾಲಯಕ್ಕೆ ಕ್ಲೇಮ್ ಅರ್ಜಿಯನ್ನು ಪರಿಗಣಿಸಲು ಯಾವುದೇ ನ್ಯಾಯವ್ಯಾಪ್ತಿ ಹೊಂದಿಲ್ಲ. ಕೆಲಸಗಾರನು ನಿರ್ದಿಷ್ಟ ಅಂಗವೈಕಲ್ಯವನ್ನು ಅನುಭವಿಸಿದರೂ, ಅಂತಹ ಅಂಗವೈಕಲ್ಯದಿಂದಾಗಿ, ಗಳಿಕೆಯ ನಷ್ಟವಾಗಿದೆಯೇ ಎಂಬ ಪ್ರಶ್ನೆ. ಉದ್ಯೋಗದ ಅವಧಿಯಲ್ಲಿ ಅವರು ಅನುಭವಿಸಿದ ಗಾಯಗಳಿಂದಾಗಿ ಮೊತ್ತವನ್ನು ಕ್ಲೈಮ್ ಮಾಡಲು ಅವರು ಅರ್ಹರಾಗಿದ್ದಾರೆ ಎಂದು ಪ್ರತಿವಾದಿಯು ಪ್ರತಿಪಾದಿಸಿದರು. ಆದ್ದರಿಂದ ಅವರ ಕ್ಲೇಮ್ ಇಸಿಎ ಅಡಿಯಲ್ಲಿದೆ. ಅಂತಹ ಸಂದರ್ಭದಲ್ಲಿ ವ್ಯಾಜ್ಯ ಇತ್ಯರ್ಥಪಡಿಸುವ ವ್ಯಾಪ್ತಿ ಉದ್ಯೋಗಿಗಳ ಪರಿಹಾರ ಆಯುಕ್ತರ ಮುಂದೆ ಇರುತ್ತದೆ, ಕಾರ್ಮಿಕ ನ್ಯಾಯಾಲಯದ ಮುಂದೆ ಅಲ್ಲ ಎಂದು ನ್ಯಾಯಮೂರ್ತಿ ಕೆ ಎಸ್ ಮುದ್ಗಲ್ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದೆ. ಕೈಗಾರಿಕಾ ವ್ಯಾಜ್ಯಗಳ ಕಾಯಿದೆಯ ಸೆಕ್ಷನ್ 33(2)ರ ಅನ್ವಯ ಕಾರ್ಮಿಕ ನ್ಯಾಯಾಲಯಕ್ಕೆ ಕಾರ್ಮಿಕರ ಪರಿಹಾರ ಅರ್ಜಿಯನ್ನು ಪರಿಹರಿಸುವ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೆಎಸ್ ಆರ್ ಟಿಸಿ ಬಸ್ ಚಾಲಕ ಕೆ. ಶಿವರಾಂ ಕರ್ತವ್ಯದ ವೇಳೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಅವರು ಮಂಗಳೂರಿನ ಕಾರ್ಮಿಕ ನ್ಯಾಯಾಲಯದಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು. ಕೈಗಾರಿಕಾ ವ್ಯಾಜ್ಯ ಕಾಯಿದೆ 1947ರ ಸೆಕ್ಷನ್ 33ಸಿ(2) ಅಡಿ ರೂ. 5.50,000 ಪರಿಹಾರ ಕೋರಿದ್ದರು. ಕೆಎಸ್ ಆರ್ ಟಿಸಿ ಈ ಪರಿಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಬ್ಬಂದಿ ಈಗಾಗಲೇ ಮೋಟಾರು ವಾಹನ ಕಾಯಿದೆಯಡಿ ಪರಿಹಾರ ಪಡೆದಿದ್ದಾರೆ. ಮತ್ತೆ ಪರಿಹಾರ ಪಡೆಯುವ ಹಕ್ಕಿಲ್ಲ ಎಂದು ಅದು ವಾದಿಸಿತ್ತು. ವಾದ-ಪ್ರತಿವಾದ ಆಲಿಸಿದ ಕಾರ್ಮಿಕ ನ್ಯಾಯಾಲಯ, ಸಿಬ್ಬಂದಿ ಮೋಟಾರು ವಾಹನ ಕಾಯಿದೆ ಮತ್ತು ನೌಕರರ ಪರಿಹಾರ ಕಾಯಿದೆ ಎರಡರ ಅಡಿಯಲ್ಲೂ ಪರಿಹಾರ ಪಡೆಯಬಹುದು ಎಂದು ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಕೆಎಸ್ ಆರ್ ಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.