ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮತ್ತು ನಿವಾಸಗಳಿಗೆ ಲೋಕಾಯುಕ್ತ ದಾಳಿ ನಡೆಸಿದ್ದು, ಆಯುಕ್ತ ಆನಂದ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸಿ.ಪಿ.ಐ.ಎಂ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕಮೀಷನರ್ ಹಟಾವೋ MCC ಬಚಾವೋ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಪಾಲಿಕೆ ಮುಂಭಾಗದ ರಸ್ತೆ ತಡೆಗೆ ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.ಜನರ ತೆರಿಗೆ ದುಡ್ಡಿನಿಂದ ಅಕ್ರಮ ಆಸ್ತಿ ಸಂಪಾದಿಸಿರೋದಾಗಿ ಆರೋಪಿಸಿರುವ ಪ್ರತಿಭಟನಾಕಾರರು ಕೆ.ಎ.ಎಸ್ ಗ್ರೇಡ್ ಅಧಿಕಾರಿಯಾಗಿರುವ ಆನಂದ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.