ವಿಜಯೇಂದ್ರ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ- ಕಟೀಲ್ ನಮ್ಮ ಜೊತೆಗಿದ್ದಾರೆ -ಯತ್ನಾಳ್ ಸ್ಫೋಟಕ ಹೇಳಿಕೆ

ಮಂಗಳೂರು(ವಿಜಯಪುರ): ನಾನು ವಿಜಯೇಂದ್ರನ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ, ನಳಿನ್ ಕುಮಾರ್ ಸಹಿತ ಹಲವರು  ನಮ್ಮ ಜೊತೆಗಿದ್ದಾರೆ ಎಂದು ಬಿಜೆಪಿ ಬಂಡಾಯ ನಾಯಕ ಯತ್ನಾಳ್ ಹೇಳಿದ್ದಾರೆ.


ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಎಂ ಎಲ್ ಎ ಆಗಿದ್ದಾರೆ , ನೀವು ವಿಧಾನಸೌದ ಮೆಟ್ಟಿಲು ಹತ್ತಲು, ಕಾಂಗ್ರೆಸ್ ಕೊಟ್ಟ ಭಿಕ್ಷೆ ಎಂದು ಡಿ ಕೆ ಶಿವಕುಮಾರ್  ಹೇಳಿದ್ದು, ಇವರಿಬ್ಬರ ನಡುವೆ ಹೊಂದಾಣಿಕೆ ಇದೆ ಎಂಬುವುದು ಒಪ್ಪಿಕೊಂಡಂತಾಗಿದೆ. ಅಂತವರ ಜೊತೆ ಹೊಂದಾಣಿಕೆ ಆಗುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ಸಂಘದ ಹಿರಿಯರು ಕಿವಿಮಾತು ಹೇಳಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನನಗೆ ಸಂದೇಶ ಕಳುಹಿಸಿದ್ದಾರೆ. ಸ್ವಲ್ಪ ದಿನ ಸಮಾಧಾನದಿಂದ ಇರುವಂತೆ ಸೂಚಿಸಿ, ಎಲ್ಲವನ್ನೂ ಸರಿ ಮಾಡುವ ಭರವಸೆ ನೀಡಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕರಿಗೆ ಸೂಕ್ತ ಗೌರವ ಕೊಡುವ ಕೆಲಸ ಮಾಡುವುದಾಗಿ ಹೇಳಿದ್ದಾರೆ. ನಾನು ಈಗ ಪಕ್ಷದ ವಿರುದ್ದ ಯಾವುದೇ ಹೇಳಿಕೆ ಕೊಡುವುದಿಲ್ಲ. ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ಮುಕ್ತ ಮಾಡಿ, ಬಿಜೆಪಿಯಲ್ಲಿ ನಿಷ್ಟಾವಂತ ರಾಜಕಾರಣಿಗಳಿಗೆ ಗೌರವ ಕೊಡುವ ಭರವಸೆ ನೀಡಿದ್ದಾರೆ. ನಾನು ಪಕ್ಷದ ಹಿರಿಯರು ಹಾಗೂ ಸಂಘದವರು ಹೇಳಿದಂತೆ ಕೇಳುವೆ ಎಂದ ಯತ್ನಾಳ್, ನಮ್ಮ ಪಾದಯಾತ್ರೆ ಯಾರದೇ ನೇತೃತ್ವದಲ್ಲಿ ಅಲ್ಲ. ಬಿಜೆಪಿಯ ಸಾಮೂಹಿಕ ನಾಯಕತ್ವದಲ್ಲಿ ನಡೆಯಲಿದೆ. ಬರುವವರು ಬರಬಹುದು, ಬಿಡುವವರು ಬಿಡಬಹುದು ಎಂದು ಹೇಳಿದ್ದಾರೆ.

ನಾವು ಭಿನ್ನಮತೀಯರಲ್ಲ, ಬಂಡಾಯಗಾರರಲ್ಲ. ಬಿಜೆಪಿ ಪಕ್ಷವನ್ನು ಹೊಂದಾಣಿಕೆ ರಾಜಕಾರಣ ಎಂಬ ಶಾಪದಿಂದ ಮುಕ್ತ ಮಾಡಿ, ನಾವು ನಿಜವಾದ ಬಿಜೆಪಿ ಕಟ್ಟಬೇಕು ಅಂದು ಕೊಂಡಿರುವವರು. ನಮ್ಮನ್ನು ಭಿನ್ನಮತೀಯ, ಅಥವಾ ಬಂಡಾಯಗಾರರೆಂದು ಮಾದ್ಯಮದವರು ನಮ್ಮನ್ನು ಕರೆಯುವುದು ಬೇಡಾ. ನಮಗೆ ಬಂಡಾಯ ಎಂದು ನೀವು ಕರೆದರೆ ವಿಜಯೇಂದ್ರ ನಿಮಗೆ ಏನೋ ಪ್ಯಾಕೇಜ್ ಕೊಟ್ಟಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ. ನಮ್ಮ ಗುಂಪಿಗೆ ಬಂಡಾಯಗಾರರೆನ್ನದೇ ಪಕ್ಷದ ವೃದ್ದಿಗಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರು ಎಂದು ಕರೆಯಿರಿ. ಯಾವುದೇ ಸಭೆ ಕರೆದರೂ ಒಬ್ನೊಬ್ಬರೇ ಹೊಗಿ ಕಾಂಪ್ರಮೈಸ್ ಆಗಲ್ಲ, ಎಲ್ಲರೂ ಒಟ್ಟಿಗೆ ಹೋಗುತ್ತೇವೆ. ನಳೀನ್ ಕುಮಾರ್ ಕಟೀಲ್ ಅವರು ‌ಬರಬೇಕಿತ್ತು. ಅವರಿಗೆ ಡೆಂಗ್ಯೂ ಆದ ಕಾರಣ ಮೊನ್ನೆ ನಡೆದ ಸಭೆಗೆ ಬಂದಿಲ್ಲ. ನೀವು ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ದ ಎಂದಿದ್ದಾರೆ. ಜೊತೆಗೆ ಸಾಕಷ್ಟು ಜನರು ಕೂಡಾ ಕರೆ ಮಾಡಿದ್ದಾರೆ. ಮುಂದಿನ ಸಭೆಗೆ ಬಹಳಷ್ಟು ಜನ ಬರುತ್ತಾರೆ. ಆಗ ನಿಷ್ಟಾಂವತ ಬಿಜೆಪಿಗರ ಟೀಮ್ ದೊಡ್ಡದಾಗಲಿದೆ. ಆಗ ಅನಿಷ್ಟರು ಕುರ್ಚಿ ಖಾಲಿ‌ ಮಾಡಿಕೊಂಡು ಮನೆಗೆ ಹೋಗಬೇಕಾಗುತ್ತದೆ ಎಂದು ಯತ್ನಾಳ್ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

LEAVE A REPLY

Please enter your comment!
Please enter your name here