ರೈಲ್ವೇ ಪೊಲೀಸ್ ಸಿಬ್ಬಂದಿಯಿಂದ ಪ್ರಯಾಣಿಕನ ಜೀವ ರಕ್ಷಣೆ-ವಿಡಿಯೋ ವೈರಲ್

ಮಂಗಳೂರು: ನಗರದ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಏರಲು ಪ್ರಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕನೊಬ್ಬನನ್ನು ರೈಲ್ವೇ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಓರ್ವರು ಪ್ರಯಾಣಿಕನ ಪ್ರಾಣ ರಕ್ಷಿಸಿದ ಘಟನೆ ಆ.17ರ ರಾತ್ರಿ ನಡೆದಿದೆ.

ಆ.17ರ ರಾತ್ರಿ 9.35ರ ವೇಳೆಗೆ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಏರಲು ಪ್ರಯಾಣಿಕಯೋರ್ವರು  ಪ್ರಯತ್ನಿಸಿದ್ದಾರೆ. ಈ ವೇಳೆ ಸಮತೋಲನ ಕಳೆದುಕೊಂಡ ವ್ಯಕ್ತಿ ಇನ್ನೇನು ರೈಲು ಹಳಿ ಮೇಲೆ ಬೀಳುವುದರಲ್ಲಿದ್ದಾಗ ಅಲ್ಲೇ ಇದ್ದ ರೈಲ್ವೇ ಪೊಲೀಸ್‌ ಸಿಬ್ಬಂಧಿ  ಎಂ. ರಾಘವನ್ ಆತನ  ಕೈ ಹಿಡಿದು ಮೇಲಕೆತ್ತಿ ರಕ್ಷಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್‌ ಆಗುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ‌

ವಿಡಿಯೋ ಕೃಪೆ ವಾರ್ತಾ ಭಾರತಿ

#Mangalore rly police saved passengers life

LEAVE A REPLY

Please enter your comment!
Please enter your name here