ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿ ಕಲ್ಲು ಶಾಲೆಯಲ್ಲಿ ಒಕ್ಕೂಟದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷರಾದ ಸರೋಜಾರವರ ಅಧ್ಯಕ್ಷತೆಯಲ್ಲಿ ದ.1 ರಂದು ನಡೆಯಿತು. ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್ ಗೌಡ ರವರು ಮಾತನಾಡಿ , ಸಂಘದ ಲೋನ್ ಲಿಮಿಟ್ ಬಗ್ಗೆ, ಲಾಭಂಶ ವಿಷಯದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ವಲಯದಲ್ಲಿ ಎಲ್ಲಾ ಸದಸ್ಯರ ಸಹಕಾರದಿಂದ ಅಜ್ಜಿಕಲ್ಲು ಒಕ್ಕೂಟ ಉತ್ತಮ ಸ್ಥಿತಿಯಲ್ಲಿದೆ ಮುಂದಕ್ಕೆ ಇದೆ ರೀತಿ ಮುಂದುವರಿಯಲಿ ಎಂದು ತಿಳಿಸಿದರು.
ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಜವಾಬ್ದಾರಿ ತಂಡಗಳ ಉತ್ತಮ ವರದಿಗೆ ಅಭಿನಂದನೆ ಸಲ್ಲಿಸಿದರು. ಸರ್ಕಾರಿ ಸೌಲಭ್ಯ, ಕೃಷಿಮಾಹಿತಿ, ಕಾನೂನುಮಾಹಿತಿ ಇತ್ಯಾದಿ ಮಾಹಿತಿಗಳು ನಿರಂತರ ಪತ್ರಿಕೆಯಲ್ಲಿ ಸಿಗುತ್ತಿದ್ದು ಪ್ರತಿಯೊಬ್ಬರು ಪತ್ರಿಕೆಯನ್ನು ಓದುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದ ಅವರು ಒಕ್ಕೂಟ ಇನ್ನಷ್ಟು ಪ್ರಗತಿ ಹೊಂದಲು ಒಕ್ಕೂಟ ಪದಾಧಿಕಾರಿಗಳು, ಸದಸ್ಯರ ಸಹಕಾರ ಅಗತ್ಯ ಎಂದು ಹೇಳಿದರು.
ಪದಾಧಿಕಾರಿಗಳಾದ ಮೋಹನ್ ಚಂದ್ರ, ಶಿಲ್ಪರೈ, ಉಷಾ ಕುಮಾರಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪದ್ಮಾವತಿ ಸ್ವಾಗತಿಸಿ, ಸುನಿತಾ ವಂದಿಸಿದರು. ಕಾರ್ಯದರ್ಶಿ ಶಿಲ್ಪಾ ರೈ ಕಾರ್ಯಕ್ರಮ ನಿರೂಪಿಸಿದರು.