ವ್ಯಕ್ತಿಯನ್ನು ಒಂದು ಕಿಲೋ. ಮೀಟರ್ ಎಳೆದೋಯ್ದ ಸ್ಕೂಟರ್ ಸವಾರ

ಬೆಂಗಳೂರು : ನಗರದ ಮಾಗಡಿ ರಸ್ತೆಯ ಹೊಸ ಹಳ್ಳಿ ಮೆಟ್ರೋ ನಿಲ್ದಾಣ ದ ಬಳಿ ನಡೆದಿರುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಕೂಟರ್ ಗೆ ಜೋತು ಬಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಸುಮಾರು ಒಂದು ಕಿಲೋ ಮೀಟರ್ ನಷ್ಟು ದೂರ ಎಳೆದೋಯ್ಯುತ್ತಿರುವುದು ಬಳಿಕ ಆಟೋ ಒಂದು ಸ್ಕೂಟರನ್ನು ಅಡ್ಡಕಟ್ಟಿ ತಡೆದಿರುವುದು ವಿಡಿಯೋ ದಲ್ಲಿ ದಾಖಲಾಗಿದೆ.


ರಾಂಗ್ ಎಂಟ್ರಿ ಕೊಟ್ಟ ದ್ವಿಚಕ್ರ ವಾಹನ ಟಾಟಾ ಸುಮೋ ಗೆ ಡಿಕ್ಕಿ ಹೊಡೆದಿದೆ. ಟಾಟಾ ಸುಮೋ ಡ್ರೈವರ್ ದ್ವಿಚಕ್ರ ವಾಹನ ಸವಾರನನ್ನು ಪ್ರಶ್ನಿಸಲು ಮುಂದಾಗುತ್ತಿದ್ದಂತೆ ದ್ವಿಚಕ್ರ ಸವಾರ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ದ್ವಿಚಕ್ರ ವಾಹನ ಸವಾರನನ್ನು ಹಿಡಿಯಲು ಮುಂದಾದ ಟಾಟಾ ಸುಮೋ ಚಾಲಕ ದ್ವಿಚಕ್ರ ಕ್ಕೆ ಜೋತು ಬಿದ್ದಿದ್ದಾನೆ. ಜೋತು ಬಿದ್ದ ಸುಮೋ ಚಾಲಕನನ್ನು ದ್ವಿಚಕ್ರ ಸವಾರ ಧರ ಧರನೆ ಎಳೆದೋಯ್ದಿದ್ದಾನೆ. ಬೆನ್ನಟ್ಟಿದ ಸಾರ್ವಜನಿಕರು ದ್ವಿಚಕ್ರ ಸವಾರನನ್ನು ನಿಲ್ಲಿಸಿ ಹಿಗ್ಗಾಮುಗ್ಗ ಧಳಿಸಿ ಸ್ಥಳಕ್ಕಾಗಮಿಸಿದ ವಿಜಯ ನಗರ ಪೊಲೀಸರ ಕೈಗೊಪ್ಪಿಸಿದ್ದಾರೆ. ಇಬ್ಬರು ಚಾಲಕರನ್ನು ಆಸ್ಪತ್ರೆಗೆ ದಾಖಳಿಸಲಾಗಿದೆ.

LEAVE A REPLY

Please enter your comment!
Please enter your name here