ಟೀಕೆಗೆ ತಕ್ಕ ಪ್ರತ್ತ್ಯುತ್ತರ ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಟೀಕೆ ಎಂದರೆ ಯಾರೋ ಅಥವಾ ಯಾವುದೋ ನಕಾರಾತ್ಮಕ ಗುಣಗಳ ಬಗ್ಗೆ ತೀರ್ಪಿನ ನಿರ್ಮಾಣ. ಟೀಕೆಯೂ ಪೂರ್ವ ಸಿದ್ದತೆಯಿಲ್ಲದ ಕಾಮೆಂಟ್‌ ಗಳಿಂದ, ಲಿಖಿತ ವಿವರವಾದ ಪ್ರತಿಕ್ರಿಯೆವರೆಗೂ ಇರುತ್ತದೆ.‌ ಟೀಕೆಯೂ ಸೈದ್ದಾಂತಿಕಾ, ಪ್ರಾಯೋಗಿಕ ಇಂಪ್ರೆಷನಿಸ್ಟಿಕ್‌, ಪರಿಣಾಮಕಾರಿ, ವಿಧೇಯಕ ಅಥವಾ ವಿವರಣಾತ್ಮಕ ಸೇರಿದಂತೆ ಹಲವಾರು ಅತಿಕ್ರಮಿಸುವ ವಿಧಗಳಲ್ಲಿ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳಿಂದ ರಾಜಕೀಯ ಟೀಕೆಗಳು ಹೆಚ್ಚು ಹೆಚ್ಚಾಗಿ ಬರತೊಡಗಿದ್ದು,ಬೆಂಗಳೂರಿನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಈ ಟೀಕೆಗೆ ಪ್ರತ್ತ್ಯುತ್ತರ ನೀಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ನಿನ್ನೆ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರ ಮನೆ ದೇವರಾದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕಾಗಿನೆಲೆಯ ಈಶ್ವರಾನಂದ ಸ್ವಾಮೀಜಿ ಸಿಎಂ ಆಡಳಿತ ವೈಖರಿ ಬಗ್ಗೆ ಪೂರ್ವ ಮಾಹಿತಿ ಇಲ್ಲದೆ ಟೀಕೆ ಮಾಡಿದ್ದರು. ಬೆಂಗಳೂರಿನಲ್ಲಿ ಮಳೆಯಿಂದ ತುಂಬಾ ಅವಾಂತರವಾಗಿತ್ತು. ಬಹಳಷ್ಟು ಬಡಾವಣೆಗಳು ಮಳೆ ನೀರಿನಿಂದ ಮುಳುಗಿತ್ತು. ಈ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳಿಗೆ ತಿಳಿದಿಲ್ಲ” ಎಂದು ಬೊಮ್ಮಾಯಿ ಸಮ್ಮುಖದಲ್ಲೇ ಟೀಕಿಸಿದ್ದರು. ಇದರಿಂದ ಸ್ವಲ್ಪ ಮಟ್ಟಿನ ಮುಜುಗರಗೊಂಡು ವಿಚಲಿತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಮೀಜಿ ಕೈಯಿಂದ ಮೈಕ್ ಕಿತ್ತುಕೊಂಡು “ರಾಜಕಾಲವೆ ತೆರವು ಮಾಡಲಾಗಿದೆ. ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ” ಎಂದು ಪತ್ಯುತ್ತರದ ಟಕ್ಕರ್ ಕೊಟ್ಟು ಸ್ವಾಮೀಜಿಗೆ ಮುಜುಗರವನ್ನುಂಟು ಮಾಡಿದರು.

LEAVE A REPLY

Please enter your comment!
Please enter your name here