ಜರ್ಮನಿಯ ಮ್ಯೂನಿಚ್ ದಿಂದ ಪ್ರಜ್ವಲ್ ರೇವಣ್ಣ ಟಿಕೆಟ್ ಬುಕ್ 

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಗೆ ಬೇಕಾಗಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ. ಜರ್ಮನಿಯ ಮ್ಯೂನಿಚ್ ದಿಂದ ಪ್ರಜ್ವಲ್ ಟಿಕೆಟ್ ಬುಕ್ ಮಾಡಿದ್ದು ಮೇ 31 ರ ಮದ್ಯರಾತ್ರಿ ಬೆಂಗಳೂರಿಗೆ ತಲುಪಲಿದ್ದಾರೆ. ಲುಫ್ತಾನ್ಸಾ ವಿಮಾನದಲ್ಲಿ ಟಿಕೇಟ್ ಬುಕ್ ಮಾಡಿಸಿಕೊಂಡಿರುವ ಪ್ರಜ್ವಲ್ ನೇರವಾಗಿ ಎಸ್ ಐ ಟಿ ಎದುರು ಹಾಜರಾಗಲಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬರುತ್ತಿದ್ದಂತೆ ಎಸ್ ಐ ಟಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆ ಇದೆ. ಮೊನ್ನೆಯಷ್ಟೇ ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ಕೊಟ್ಟಿದ್ದ ಪ್ರಜ್ವಲ್ ಶುಕ್ರವಾರ ಬರುವುದಾಗಿ ಹೇಳಿದ್ದರು.

LEAVE A REPLY

Please enter your comment!
Please enter your name here