ಉರುಳಿದ ಮರದ ದಿಮ್ಮಿ – ಅಪಾಯದಿಂದ ಪಾರಾದ ಪಿಕಪ್‌ ಚಾಲಕ

ಮಡಿಕೇರಿ : ಬಾರಿ ಗಾತ್ರದ ಮರದ ದಿಮ್ಮಿ ಪಿಕಪ್‌ ವಾಹನದ ಮೇಲೆ ಉರುಳಿ ಬಿದ್ದ ಘಟನೆ ಮಡಿಕೇರಿ-ಮಂಗಳೂರು ರಸ್ತೆಯ ಜೋಡುಪಾಲದಲ್ಲಿ ನಡೆದಿದೆ. ಮಡಿಕೇರಿಯಿಂದ ಬಾರಿ ಗಾತ್ರದ ಮರದ ದಿಮ್ಮಿಗಳನ್ನು 14 ಚಕ್ರದ ಲಾರಿಯೊಂದರಲ್ಲಿ ಮಂಗಳೂರು ಕಡೆಗೆ ಸಾಗಿಸುವ ವೇಳೆ ಜೋಡುಪಾಲ ತಿರುವಿನ ಬಳಿ ಮರದ ದಿಮ್ಮಿಗಳಿಗೆ ಕಟ್ಟಲಾಗಿದ್ದ

ಹಗ್ಗ ಏಕಾಏಕಿ ತುಂಡಾಗಿ ದಿಮ್ಮಿಗಳು ರಸ್ತೆಗೆ ಉರುಳಿದೆ. ಈ ವೇಳೆ ಇದೇ ದಾರಿಯಲ್ಲಿ ಬಂದ ಪಿಕಪ್‌ ವಾಹನಕ್ಕೆ ಮರದ ದಿಮ್ಮಿ ಉರುಳಿ ಬಿದ್ದಿದ್ದು ಪಿಕಪ್‌ ಮುಂಭಾಗದ ಗಾಜನ್ನು ಸೀಳಿ ಹೊರಕ್ಕೆ ಬಂದಿದೆ. ಪಿಕಪ್‌ ಚಾಲಕ ಪವಾಡ ಸದೃಶ್ಯವಾಗಿ ಪಾರಾಗಿದ್ದು , ಪಿಕಪ್‌ ಜಖಂ ಗೊಂಡಿದೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here