ವಿಶಾಖಪಟ್ಟಣ – ಆಂಧ್ರದ ಹೊಸ ರಾಜಧಾನಿ

ಹೊಸದಿಲ್ಲಿ: ವಿಶಾಖಪಟ್ಟಣ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ ಎಂದು ಹೊಸದಿಲ್ಲಿಯಲ್ಲಿ ನಡೆದ ಅಂತರ್ ರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ. ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೋಡಲು ನಾನು ನಿಮ್ಮನ್ನು ಹಾಗೂ  ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ ಎಂದು ಆಂಧ್ರಪ್ರದೇಶ ಸಿಎಂ ಹೇಳಿದ್ದಾರೆ.

2014 ರಲ್ಲಿ ತೆಲಂಗಾಣ ರಾಜ್ಯ ರಚನೆಯಾದಾಗ ಹೊಸ ರಾಜ್ಯವು ಹೈದರಾಬಾದ್ ನ್ನು ತನ್ನ ರಾಜಧಾನಿಯಾಗಿ ಪಡೆಯಿತು.2015 ರಲ್ಲಿ ಟಿಡಿಪಿಯ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರಕಾರ ಕೃಷ್ಣಾ ನದಿಯ ದಡದಲ್ಲಿರುವ ವಿಜಯವಾಡ-ಗುಂಟು ಪ್ರದೇಶದಲ್ಲಿನ ಅಮರಾವತಿಯನ್ನು ಹೊಸ ರಾಜಧಾನಿಯಾಗಿ ರೂಪಿಸುವುದಾಗಿ ಘೋಷಿಸಿತ್ತು. ಬಳಿಕ 2020 ರಲ್ಲಿ ರಾಜ್ಯವು ಅಮರಾವತಿ, ವಿಶಾಖಪಟ್ಟಣಂ ಹಾಗೂ  ಕರ್ನೂಲ್ ಮೂರು ರಾಜಧಾನಿಗಳನ್ನು ಹೊಂದಲು ಯೋಜಿಸಿತ್ತು.  ಅಮರಾವತಿ ಔಪಚಾರಿಕವಾಗಿ ರಾಜಧಾನಿಯಾಗಿ ಉಳಿಯಿತು.

LEAVE A REPLY

Please enter your comment!
Please enter your name here